ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರ ವಿರುದ್ಧ ದಾಖಲಾಗಿದ್ದ ದೇಶದ್ರೋಹ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯನ್ನು ಲಾಹೋರ್ ಹೈಕೋರ್ಟ್ ರದ್ದುಪಡಿಸಿದೆ.

‘ವಿಶೇಷ ನ್ಯಾಯಾಲಯವು ಸಂವಿಧಾನಬಾಹಿರವಾಗಿ ಮರಣದಂಡನೆ ಆದೇಶ ನೀಡಿದೆ’ ಎಂದುಮೂವರು ಸದಸ್ಯರ ಲಾಹೋರ್ ಹೈಕೋರ್ಟ್‌ನನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನದ ಹಾಲಿ ಸರ್ಕಾರದಲ್ಲಿ ಮುಷರಫ್‌ಗೆ ನಿಷ್ಠರಾಗಿರುವ ಹಲವರು ಇದ್ದಾರೆ. ಹೀಗಾಗಿ ಮತ್ತೊಮ್ಮೆ ವಿಶೇಷ ನ್ಯಾಯಾಲಯ ರಚಿಸಿ, ಹೊಸ ವಿಚಾರಣೆ ಆರಂಭಿಸುವುದು ಅನುಮಾನ ಎಂದು ಮೂಲಗಳನ್ನು ಉಲ್ಲೇಖಿಸಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.

‘ಮುಷರಫ್ ವಿರುದ್ಧ ದಾಖಲಾದ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ದೇಶದ್ರೋಹ ಮತ್ತು ಸಂವಿಧಾನ ಉಲ್ಲಂಘನೆಯಂಥ ಕೃತ್ಯಗಳನ್ನುಏಕಾಂಗಿಯಾಗಿ ಮಾಡಲು ಆಗುವುದಿಲ್ಲ. ಹಲವರು ಇದರಲ್ಲಿ ಶಾಮೀಲಾಗಿರಬಹುದು’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರಾಜಕೀಯ ಚಳವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ2007ರಲ್ಲಿ ಸಂವಿಧಾನವನ್ನು ತಿರುಚಿ, ನ್ಯಾಯಾಂಗವನ್ನು ದುರ್ಬಲಗೊಳಿಸಿ, ದೇಶದ ಮೇಲೆ ತುರ್ತುಸ್ಥಿತಿ ಹೇರಿದ್ದರು. ಚಳವಳಿಗಳು ಮುಷರಫ್ ಅವರ ಅಧಿಕಾರವನ್ನು ದುರ್ಬಲಗೊಳಿಸಿತ್ತು. 2008ರಲ್ಲಿ ಮುಷರಫ್ ರಾಜೀನಾಮೆ ನೀಡಿದ್ದರು.

ನವೆಂಬರ್ 3,2007ರಲ್ಲಿ ದೇಶದ ಮೇಲೆ ಸಂವಿಧಾನಬಾಹಿರವಾಗಿ ತುರ್ತುಸ್ಥಿತಿ ಹೇರಲಾದ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯವುಡಿ.17, 2019ರಂದುಮರಣದಂಡನೆ ವಿಧಿಸಿತ್ತು.ಪ್ರಸ್ತುತ ದುಬೈನಲ್ಲಿ ನೆಲೆಸಿರುವ ಮುಷರಫ್, 1999ರಿಂದ 2008ರವರೆಗೆ ಪಾಕಿಸ್ತಾನದ ಸರ್ವಾಧಿಕಾರಿಯಾಗಿದ್ದರು.

ಇನ್ನಷ್ಟು...

ಪಾಕ್ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್‌ಗೆ ಗಲ್ಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ನನ್ನ ವಾದ ಆಲಿಸಿಲ್ಲ; ನಾನು ಬಲಿಪಶು: ಗಲ್ಲು ಶಿಕ್ಷೆಗೆ ಒಳಗಾಗಿರುವ ಮುಷರಫ್

ಗಲ್ಲು ಶಿಕ್ಷೆ ಪ್ರಶ್ನಿಸಿ ಮುಷರಫ್ ಸಲ್ಲಿಸಿದ್ದ ಅರ್ಜಿ ವಾಪಸ್

ಮುಷರಫ್ ಚುನಾವಣೆ ಸ್ಪರ್ಧೆಗೆ ಆಜೀವ ನಿಷೇಧ

ತೀರ್ಪು ಘೋಷಣೆಗೆ ತಡೆ: ಮುಷರಫ್ ಮನವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.