ಗುರುವಾರ , ಫೆಬ್ರವರಿ 20, 2020
29 °C
ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುತ್ತಿರುವ ಜಪಾನ್, ಅಮೆರಿಕ

ಕೊರೊನಾ ವೈರಸ್‌: ಚೀನಾದಲ್ಲಿ ಮೃತರ ಸಂಖ್ಯೆ 131ಕ್ಕೆ ಏರಿಕೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಬೀಜಿಂಗ್: ಕೊರೊನಾ ವೈರಸ್‌ ಸೋಂಕಿಗೆ ಚೀನಾದ ವುಹಾನ್‌ ನಗರದಲ್ಲಿ ಮಂಗಳವಾರ ಮತ್ತೆ 25 ಮಂದಿ ಬಲಿಯಾಗಿದ್ದು, ಮೃತಪಟ್ಟವರ ಸಂಖ್ಯೆ 131ಕ್ಕೆ ಏರಿಕೆಯಾಗಿದೆ. 840 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.

ಚೀನಾದಾದ್ಯಂತ ಈವರೆಗೆ 5,300ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಈ ಮಧ್ಯೆ, ವುಹಾನ್‌ನಲ್ಲಿರುವ ತಮ್ಮ ದೇಶದವರನ್ನು ಜಪಾನ್ ಮತ್ತು ಅಮೆರಿಕ ವಾಪಸ್ ಕರೆಸಿಕೊಂಡಿವೆ. ಜಪಾನ್‌ನ 200 ಮಂದಿ ಹಾಗೂ ಅಮೆರಿಕದ 240 ಜನ ಬುಧವಾರ ಬೆಳಿಗ್ಗೆ ಸ್ವದೇಶಕ್ಕೆ ವಾಪಸಾಗಿದ್ದಾರೆ.

ವುಹಾನ್‌ನಲ್ಲಿ ಬಂದ್ ವಾತಾವರಣ: ಮಾರಕ ಸೋಂಕಿನಿಂದಾಗಿ ವುಹಾನ್‌ನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ದೊಡ್ಡ ಉದ್ಯಮಗಳು ಕೆಲಸ ಸ್ಥಗಿತಗೊಳಿಸಿದ್ದು, ಮನೆಯಿಂದಲೇ ಕೆಲಸ ಮಾಡುವಂತೆ ನೌಕರರಿಗೆ ಸೂಚಿಸಿದೆ. ಹೊಸ ವರ್ಷದ ರಜೆ ಅವಧಿಯನ್ನು ಸರ್ಕಾರ ವಿಸ್ತರಿಸಿದೆ.

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು