ಗುರುವಾರ , ಏಪ್ರಿಲ್ 9, 2020
19 °C

ಕೋವಿಡ್-19 ತುರ್ತು ನಿಧಿಗೆ ₹74 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಾರ್ಕ್‌ ಪ್ರದೇಶಕ್ಕಾಗಿ ಕೋವಿಡ್‌–19 ತುರ್ತುನಿಧಿಯನ್ನು ಸ್ಥಾಪಿಸುವ ಪ್ರಸ್ತಾವವನ್ನು ಭಾರತ ಭಾನುವಾರ ಮುಂದಿಟ್ಟಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಜನಸಂದಣಿಯಿರುವ, ಆದರೆ ಆರೋಗ್ಯ ಮೂಲಸೌಕರ್ಯ ಚೆನ್ನಾಗಿ ಇಲ್ಲದ ಈ ಪ್ರದೇಶದಲ್ಲಿ ಕೊರೊನಾ ವೈರಸ್‌ ಹರಡುವಿಕೆ ತಡೆಗೆ ಇಂತಹ ನಿಧಿ ಅಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. 

ಸಾರ್ಕ್‌ ದೇಶಗಳ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ) ಮುಖ್ಯಸ್ಥರ ನಡುವೆ ನಡೆದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ತುರ್ತುನಿಧಿಯ ವಿಚಾರವನ್ನು ಮೋದಿ ಮಂಡಿಸಿದ್ದಾರೆ. ಆರಂಭಿಕ ದೇಣಿಗೆಯಾಗಿ ಒಂದು ಕೋಟಿ ಡಾಲರ್‌ (ಸುಮಾರು ₹74 ಕೋಟಿ) ನೀಡುವುದಾಗಿಯೂ ಅವರು ಹೇಳಿದ್ದಾರೆ. 

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಈ ಸಭೆಯಲ್ಲಿ ಭಾಗಿಯಾಗಲಿಲ್ಲ. ಅವರ ಪ್ರತಿನಿಧಿಯಾಗಿ ವಿಶೇಷ ಸಹಾಯಕ ಝಫರ್‌ ಮಿರ್ಜಾ ಅವರಿದ್ದರು. ಉಳಿದ ಏಳು ರಾಷ್ಟ್ರಗಳ ಮುಖ್ಯಸ್ಥರು ಭಾಗಿಯಾಗಿದ್ದರು.  ಕೊರೊನಾ ಪಿಡುಗಿಗೆ ಆತುರದ ಪ್ರತಿಕ್ರಿಯೆ ನೀಡುವುದು ಬೇಡ ಎಂಬ ಸಲಹೆಯನ್ನು ಮೋದಿ ಕೊಟ್ಟರು. ಶಂಕಿತರ ಮಾದರಿ ಪರೀಕ್ಷೆ, ತ್ವರಿತ ಪ್ರತಿಕ್ರಿಯೆ ತಂಡಗಳಿಗೆ ತರಬೇತಿಯಂತಹ ಸಹಕಾರವನ್ನು ಸಾರ್ಕ್‌ ದೇಶಗಳಿಗೆ ನೀಡಲು ಭಾರತ ಸಿದ್ಧ ಎಂಬ ಭರವಸೆಯನ್ನೂ ಕೊಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು