ಬುಧವಾರ, ಜುಲೈ 28, 2021
21 °C

ನಾಜಿ ಗುರುತಿನ ಟ್ರಂಪ್‌ ಪ್ರಚಾರ ಜಾಹೀರಾತನ್ನು ಕಿತ್ತೆಸೆದ ಫೇಸ್‌ಬುಕ್‌ 

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಸಂಘಟಿತ ದ್ವೇಷದ ವಿರುದ್ಧದ ತನ್ನ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರದ ಪೋಸ್ಟ್‌ಗಳು ಮತ್ತು ಜಾಹೀರಾತುಗಳನ್ನು ತನ್ನ ವೇದಿಕೆಯಿಂದ ತೆಗೆದುಹಾಕಿರುವುದಾಗಿ ಫೇಸ್‌ಬುಕ್ ಗುರುವಾರ ತಿಳಿಸಿದೆ.

‌ತಲೆಕೆಳಗಾದ ಕೆಂಪು ತ್ರಿಕೋನದ ಗುರುತು ಟ್ರಂಪ್‌ ಅವರ ಜಾಹೀರಾತುಗಳಲ್ಲಿದ್ದವು. ಇದು ರಾಜಕೀಯ ಕೈದಿಗಳನ್ನು ಗುರುತಿಸಲು ನಾಜಿಗಳು ಬಳಸಿದ ಸಂಕೇತವೂ ಹೌದು. ‘ಫ್ಯಾಸಿಸ್ಟ್‌ ವಿರೋಧಿ ಆಂದೋನಕ್ಕೆ ಸಹಿ ಮಾಡಿ,’ ಎಂದು ಫೇಸ್‌ಬುಕ್‌ ಬಳಕೆದಾರನು ಕೇಳಲಾದ ಪೋಸ್ಟ್‌ಗಳನ್ನು ಟ್ರಂಪ್‌ ಮತ್ತು ಉಪಾಧ್ಯಕ್ಷ ಮೈಕ್‌ ಪೆನ್ಸ್‌ ಅವರಿಗೆ ಸಂಬಂಧಿಸಿದ ಪೇಜ್‌ಗಳು ಮತ್ತು ‘ಟೀಮ್‌ ಟ್ರಂಪ್‌’ ಫೇಸ್‌ಬುಕ್‌ ಖಾತೆಗಳಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಇದನ್ನು ಸಂಘಟಿತ ದ್ವೇಷ ಎಂದು ಪರಿಗಣಿಸಿರುವುದಾಗಿ ಫೇಸ್‌ಬುಕ್‌ ಹೇಳಿದೆ. ಅಲ್ಲದೇ, ಆ ಪೋಸ್ಟ್‌, ಜಾಹೀರಾತುಗಳನ್ನು ಕಿತ್ತೆಸೆದಿದೆ. 

‘ರಾಜಕೀಯ ಕೈದಿಗಳನ್ನು ಗುರುತಿಸಲು ಬಳಸಲಾಗುತ್ತಿದ್ದ ನಿಷೇಧಿತ ದ್ವೇಷದ ಚಿಹ್ನೆ ಬಳಸುವುದನ್ನು ನಮ್ಮ ನೀತಿ ನಿಷೇಧಿಸುತ್ತದೆ,’ ಎಂದು ಫೇಸ್‌ಬುಕ್ ಕಂಪನಿಯ ವಕ್ತಾರರು ಹೇಳಿದ್ದಾರೆ.

ತನ್ನ ವಿರೋಧಿಗಳ ಮೇಲೆ ಆಕ್ರಮಣ ಮಾಡಲು ಮತ್ತು ತೊಂದರೆ ನೀಡುವ ಸಲುವಾಗಿ ರಾಜಕೀಯ ಕೈದಿಗಳನ್ನು ಕಾನ್ಸಂಟ್ರೇಶನ್ ಕ್ಯಾಂಪ್‌ಗಳಿಗೆ ವರ್ಗೀಕರಿಸಲು ನಾಜಿ ಆಡಳಿತವು ಬಳಸಿದ ಚಿಹ್ನೆಯನ್ನೇ ಡೊನಾಲ್ಡ್ ಟ್ರಂಪ್‌ ಅವರ ಪ್ರಚಾರದ ಚಿಹ್ನೆಯೂ ಹೋಲುತ್ತದೆ. ಇದರ ಇತಿಹಾಸ ಮತ್ತು ಅರ್ಥದ ಬಗ್ಗೆ ತಿಳಿದಿರಲಿ,’ ಎಂದು ಮಾನನಷ್ಟ ವಿರೋಧಿ ಒಕ್ಕೂಟದ ಸಿಇಒ ಜೊನಾಥನ್ ಗ್ರೀನ್‌ಬ್ಲಾಟ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ತಲೆಕೆಳಗಾದ ಕೆಂಪು ತ್ರಿಕೋನವು ಫ್ಯಾಸಿಸ್ಟ್‌ ವಿರೋಧಿ ಸಂಕೇತವಾಗಿದೆ. ಆದ್ದರಿಂದಲೇ ನಾವು ಫ್ಯಾಸಿಸ್ಟ್ ವಿರೋಧದ ಕುರಿತ ಜಾಹೀರಾತಿನಲ್ಲಿ ಅಳವಡಿಸಿದ್ದೆವು’ ಎಂದು ಟ್ರಂಪ್ ಅಭಿಯಾನದ ವಕ್ತಾರ ಟಿಮ್ ಮುರ್ತಾಗ್ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು