ನ್ಯೂಯಾರ್ಕ್:ವಿಶ್ವಸಂಸ್ಥೆ ಪ್ರಧಾನ ಕಚೇರಿ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 24ರಂದು 'ಗಾಂಧಿ ಸೋಲಾರ್ ಪಾರ್ಕ್' ಉದ್ಘಾಟಿಸಲಿದ್ದಾರೆ.

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಸ್ಮರಣಾರ್ಥ₹ 71.04 ಕೋಟಿ ಮೌಲ್ಯದ ಸೋಲಾರ್ ಪ್ಯಾನಲ್ ಅನ್ನು ಭಾರತ ಉಡುಗೊರೆಯಾಗಿ ನೀಡಿದೆ. ಇದರ ಗರಿಷ್ಠ 50 ಕಿಲೋ ವಾಟ್. ಈ ಸಂದರ್ಭದಲ್ಲಿ ವಿಶ್ವಸಂಸ್ಥೆ ವಿಶೇಷ ಅಂಚೆ ಚೀಟಿಯನ್ನು ಮೋದಿ ಬಿಡುಗಡೆ ಮಾಡಲಿದ್ದಾರೆ.

‘ಇದು ಮೊದಲ ಪ್ರಯತ್ನ. ಇಲ್ಲಿ 193 ಸೌರ ಫಲಕಗಳಿದ್ದು,ವಿಶ್ವಸಂಸ್ಥೆಯ ಎಲ್ಲ 193 ಸದಸ್ಯ ರಾಷ್ಟ್ರಗಳನ್ನು ಪ್ರತಿಬಿಂಬಿಸುತ್ತದೆ’ ಎಂದುವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ ಸೈಯದ್ ಅಕ್ಬರುದ್ದೀನ್ ತಿಳಿಸಿದರು.

‘ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ಬದಲಾವಣೆಯ ಕುರಿತು ವಿಶ್ವಸಂಸ್ಥೆಯಲ್ಲಿ ಚರ್ಚೆ ನಡೆಯುತ್ತಲೇ ಇರುತ್ತದೆ. ಈ ಸಣ್ಣ ಪ್ರಯತ್ನದ ಮೂಲಕ ಮಾತುಕತೆಯನ್ನು ಮೀರಿದ ಕಾರ್ಯದ ಬಗೆಗಿನ ಇಚ್ಛಾಶಕ್ತಿಯನ್ನು ಭಾರತ ಪ್ರದರ್ಶಿಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಒಪ್ಪಂದಕ್ಕೆ ಭಾರತ ಬದ್ಧವಾಗಿದ್ದು, ಸೌರ ಉದ್ಯಾನವನ ಇದಕ್ಕೆ ಉದಾಹರಣೆಯಾಗಿದೆ’ ಎಂದರು.

‘30 ಟನ್ ಕಲ್ಲಿದ್ದಲಿನಿಂದ ಆಗುವಷ್ಟು ವಿದ್ಯುತ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಸೌರ ಪಾರ್ಕ್ ಹೊಂದಿದೆ. ಈ ಉದ್ಯಾನದಲ್ಲಿಒಂದು ಸಾವಿರ ಮರಗಳನ್ನು ಬೆಳೆಸಲು ಕ್ರಮವಹಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.