ಶುಕ್ರವಾರ, ಆಗಸ್ಟ್ 23, 2019
25 °C

ಅಮೆರಿಕಾದಲ್ಲಿ ಗುಂಡಿನ ದಾಳಿ : 20 ಮಂದಿ ಸಾವು

Published:
Updated:

ಅಮೆರಿಕಾ: ಇಲ್ಲಿ ನಡೆದ ಗುಂಡಿನ ದಾಳಿಯಲ್ಲಿ 20 ಮಂದಿ ಮೃತಪಟ್ಟಿದ್ದು 25 ಮಂದಿಗೆ ಗಾಯವಾಗಿದೆ, ಈ  ಘಟನೆಯು ಟೆಕ್ಸಾಸ್‌ಪ್ರಾಂತ್ಯದಲ್ಲಿನ ವಾಲ್‌ಮಾರ್ಟ್ ಮಳಿಗೆಯಲ್ಲಿ ಶನಿವಾರ ರಾತ್ರಿ ನಡೆದಿದೆ. 

ಈ ಘಟನೆಗೆ ಸಂಬಧಿಸಿದಂತೆ 21 ವರ್ಷದ ಅಲೆನ್‌ನನ್ನು  ಬಂಧಿಸಲಾಗಿದ್ದು ತನಿಕೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಘಟನೆಯನ್ನು ನಾನು ಖಂಡಿಸುತ್ತೇನೆ, ನಿರಪರಾಧಿಗಳನ್ನು ಕೊಲ್ಲುದನ್ನು ಸಮರ್ಥಿಸಲು ಸಾಧ್ಯವಿಲ್ಲ ಇದು ಹೇಡಿತನದ ಕೃತ್ಯ ಎಂದು  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

 ಕಳೆದ ವಾರ ಉತ್ತರ ಆಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ದಾಳಿಯಲ್ಲಿ ಮೂವರು ಮೃತರಾಗಿದ್ದರು. 

Post Comments (+)