ಭಾನುವಾರ, ಜನವರಿ 19, 2020
27 °C

ಕ್ವೀನ್ಸ್‌ ವಿ.ವಿಗೆ ಮೊದಲ ಮಹಿಳಾ ಕುಲಾಧಿಪತಿಯಾಗಿ ಹಿಲರಿ ಕ್ಲಿಂಟನ್‌ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್‌ ಅವರು ಬ್ರಿಟನ್‌ನ ಬೆಲ್‌ ಫಾಸ್ಟ್‌ನ ಕ್ವೀನ್ಸ್‌ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ ನೇಮಕಗೊಂಡಿದ್ದಾರೆ.‌‌‌ ಹಿಲರಿ ಅವರು, ಈ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡ ಮೊದಲ ಮಹಿಳಾ ಕುಲಾಧಿಪತಿ.

2018ರ ಅಕ್ಟೋಬರ್‌ನಲ್ಲಿ ಇದೇ ವಿಶ್ವವಿದ್ಯಾಲಯದಿಂದ ಹಿಲರಿ ಗೌರವ ಡಾಕ್ಟರೇಟ್‌ ಪಡೆದಿದ್ದರು. 11ನೇ ಕುಲಾಧಿಪತಿಯಾಗಿ ಜನವರಿ 1ರಂದು ನೇಮಕಗೊಂಡಿರುವ ಅವರು, ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದ್ದಾರೆ. 1849ರಲ್ಲಿ ಸ್ಥಾಪಿಸಲಾಗಿರುವ ಕ್ವೀನ್ಸ್‌ ವಿಶ್ವವಿದ್ಯಾಲಯವು ಬ್ರಿಟನ್‌ ಮತ್ತು ಐರ್ಲೆಂಡ್‌ನಲ್ಲಿ ಖ್ಯಾತಿ ಪಡೆದಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು