ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸ್ನಿಲ್ಯಾಂಡ್‌ 18ರಿಂದ ಮುಕ್ತ

Last Updated 15 ಜೂನ್ 2020, 21:14 IST
ಅಕ್ಷರ ಗಾತ್ರ

ಹಾಂಗ್‌ಕಾಂಗ್‌: ಇಲ್ಲಿನ ಡಿಸ್ನಿಲ್ಯಾಂಡ್‌ ಈ ತಿಂಗಳ 18ರಿಂದ ಸಾರ್ವಜನಿಕರ ಪ್ರವೇಶಕ್ಕೆ ಮತ್ತೆ ಮುಕ್ತವಾಗಲಿದೆ.

ಕೊರೊನಾ ಸೋಂಕು ಭೀತಿ ಕಾರಣ ಇದನ್ನು ಜನವರಿಯಿಂದ ಮುಚ್ಚಲಾಗಿತ್ತು. ಆದರೆ ಈಗ ಆರ್ಥಿಕ ಚಟುವಟಿಕೆಗಳು ಮತ್ತೆ ನಿಧಾನವಾಗಿ ಶುರುವಾಗಿರುವ ಹಿನ್ನೆಲೆಯಲ್ಲಿ ಈ ಮನರಂಜನಾ ತಾಣವನ್ನು ಪುನರಾರಂಭಿಸಲಾಗುತ್ತಿದೆ.

ಪ್ರವೇಶಿಗರ ಸಂಖ್ಯೆಗೆ ಮಿತಿ ಇರುತ್ತದೆ ಅಲ್ಲದೆ ಅಂತರವನ್ನೂ ಕಾಯ್ದುಕೊಳ್ಳಲಾಗುತ್ತದೆ. ಅಂತರ ಕಾಯ್ದುಕೊಳ್ಳಲು ಸಾಧ್ಯವಾಗದ ಕೆಲವು ಚಟುವಟಿಕೆಗಳು ಬಂದ್‌ ಆಗಿರುತ್ತವೆ. ಇಲ್ಲಿನ ಪಾರ್ಕ್‌ಗೆ ಭೇಟಿ ನೀಡುವ ಪ್ರವಾಸಿಗರು ಕೂಡ ಮುಖಗವಸು ಹಾಕಬೇಕು ಎಂದು ಡಿಸ್ನಿಲ್ಯಾಂಡ್‌ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT