ಭಾನುವಾರ, ಆಗಸ್ಟ್ 18, 2019
25 °C

ಇಮ್ರಾನ್‌–ಟ್ರಂಪ್‌ ಭೇಟಿ ಇಂದು

Published:
Updated:

ವಾಷಿಂಗ್ಟನ್‌ : ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅಮೆರಿಕ ಪ್ರವಾಸ ಕೈಗೊಂಡಿದ್ದು, ಸೋಮವಾರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು ಭೇಟಿ ಮಾಡಲಿದ್ದಾರೆ. 

ಭಾನುವಾರ ಅಮೆರಿಕದಲ್ಲಿ ನೆಲಸಿರುವ ಪಾಕಿಸ್ತಾನಿಯರನ್ನು ಉದ್ದೇಶಿಸಿ ಖಾನ್ ಮಾತನಾಡಿದರು. ಇದೇ ವೇಳೆ ಪಾಕ್‌ನ ಅಲ್ಪಸಂಖ್ಯಾತ ಸಿಂಧಿ, ಬಲೂಚಿ ಮತ್ತು ಮೊಹಜಿರ್ಸ್ ಜನಾಂಗಗಳಿಗೆ ಸೇರಿದ ಅನಿವಾಸಿ ಪಾಕಿಸ್ತಾನಿಯರಿಂದ ಪ್ರತಿಭಟನೆ ವ್ಯಕ್ತವಾಗಿದೆ. ಸಿಂಧ್‌ ಮತ್ತು ಬಲೂಚಿಸ್ತಾನದಲ್ಲಿ ನಡೆಯುತ್ತಿರುವ ಮಾನವಹಕ್ಕುಗಳ ಉಲ್ಲಂಘನೆ ಕುರಿತು ಅಮೆರಿಕ ಕಾಂಗ್ರೆಸ್‌ನ 10 ಸದಸ್ಯರು ಟ್ರಂಪ್‌ ಅವರನ್ನು ಶನಿವಾರ ಭೇಟಿ ಮಾಡಿ ಪಾಕ್‌ ಪ್ರಧಾನಿ ಅವರೊಂದಿಗಿನ ಮಾತುಕತೆಯಲ್ಲಿ ವಿಷಯ ಪ್ರಸ್ತಾಪಿಸುವಂತೆ ಮನವಿ ಮಾಡಿದ್ದಾರೆ. 

Post Comments (+)