ಶನಿವಾರ, ಮೇ 30, 2020
27 °C

ಕೋವಿಡ್-19: ಡಬ್ಯ್ಲುಎಚ್‌ಒ ಬಗ್ಗೆ ತನಿಖೆಗೆ ಭಾರತ ಸೇರಿ 62 ರಾಷ್ಟ್ರಗಳ ಒತ್ತಾಯ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ಜಿನೆವಾ: ಕೋವಿಡ್–19 ಹರಡುವುದನ್ನು ತಡೆಯಲು ವಿಶ್ವ ಆರೋಗ್ಯ ಸಂಸ್ಥೆ ಕೈಗೊಂಡ ಕ್ರಮಗಳ ಬಗ್ಗೆ ತನಿಖೆ ನಡೆಯಬೇಕು ಎಂಬ ಒತ್ತಾಯಕ್ಕೆ ಭಾರತ ಸೇರಿದಂತೆ 62 ದೇಶಗಳು ಬೆಂಬಲ ಸೂಚಿಸಿವೆ. ಇಂದಿನಿಂದ ಆರಂಭವಾಗಲಿರುವ 73ನೇ ವಿಶ್ವ ಆರೋಗ್ಯ ಸಮಾವೇಶದ (ಡಬ್ಲ್ಯುಎಚ್‌ಎ) ಸಭೆಗೆ ಪ್ರಸ್ತಾಪಿಸಲಾದ ಕರಡು ನಿರ್ಣಯದಲ್ಲಿ ಈ ಮಾಹಿತಿ ಇದೆ.

ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಕ್ರಮಗಳು ಮತ್ತು ಮಾರ್ಗಸೂಚಿಗಳ ಕುರಿತು ತನಿಖೆ ನಡೆಸುವುದಲ್ಲದೆ, ಕೊರೊನಾ ವೈರಸ್ ಬಿಕ್ಕಟ್ಟಿನ ಬಗ್ಗೆ ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ತನಿಖೆಯಾಗಬೇಕು ಎಂದು ಕರಡಿನಲ್ಲಿ ಒತ್ತಾಯಿಸಲಾಗಿದೆ.

ಕೋವಿಡ್-19ಗೆ ವಿಶ್ವ ಆರೋಗ್ಯ ಸಂಸ್ಥೆಯ ಸಂಘಟಿತ ಅಂತರರಾಷ್ಟ್ರೀಯ ಆರೋಗ್ಯ ಪ್ರತಿಕ್ರಿಯೆಯಿಂದ ಪಡೆದ ಅನುಭವ ಮತ್ತು ಪಾಠಗಳನ್ನು ಪರಿಶೀಲಿಸಲು, ಸೂಕ್ತ ಸಂದರ್ಭದಲ್ಲಿ ಸದಸ್ಯ ರಾಷ್ಟ್ರಗಳೊಂದಿಗೆ ಸಮಾಲೋಚಿಸಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನಗಳನ್ನು ಬಳಸುವುದು ಸೇರಿದಂತೆ, ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ತನಿಖೆ ಪ್ರಕ್ರಿಯೆಯನ್ನು ಪ್ರಾರಂಭಿಸಬೇಕು ಎಂದು ಕರಡಿನಲ್ಲಿ ಒತ್ತಾಯಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್–19ಕ್ಕೆ ಹೇಗೆ ಪ್ರತಿಕ್ರಿಯಿಸಿತು ಎಂಬ ಬಗ್ಗೆ ಸ್ವತಂತ್ರ, ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಗೆ ನಡೆಸಲು ಒತ್ತಾಯಿಸುತ್ತಿರುವ ಐರೋಪ್ಯ ದೇಶಗಳು ಮತ್ತು ಆಸ್ಟ್ರೇಲಿಯಾ ದೇಶಗಳು ಇತರ ರಾಷ್ಟ್ರಗಳ ಬೆಂಬಲವನ್ನೂ ಯಾಚಿಸುತ್ತಿವೆ.

ಆಸ್ಟ್ರೇಲಿಯಾದ ವಿದೇಶಾಂಗ ಸಚಿವರಾದ ಮರಿಸೆ ಪೇನ್, ಬಿಕ್ಕಟ್ಟಿನ ಕುರಿತು ತನಿಖೆ ನಡೆಸಲು ಏಕಾಏಕಿ ಡಬ್ಲ್ಯುಎಚ್‌ಒಗೆ ಅವಕಾಶ ನೀಡುವುದು 'ನಮ್ಮನ್ನೇ ಕಳ್ಳ ಬೇಟೆಗಾರ ಮತ್ತು ಗೇಮ್‌ಕೀಪರ್ ಆಗಿ ನೋಡುವಂತೆ ಮಾಡುತ್ತದೆ' ಎಂದು ಹೇಳಿರುವುದಾಗಿ ಎಬಿಸಿ ನ್ಯೂಸ್ ವರದಿ ಮಾಡಿದೆ.

ಇದು ಮುಂದೆ ಎದುರಾಗಬಹುದಾದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಅಥವಾ ಎದುರಿಸಲು ಮತ್ತು ನಮ್ಮ ನಾಗರಿಕರನ್ನು ಸುರಕ್ಷಿತವಾಗಿಡಲು ಅಂತರರಾಷ್ಟ್ರೀಯ ಸಮುದಾಯವನ್ನು ಸಜ್ಜುಗೊಳಿಸಲು ಸಹಕಾರಿಯಾಗುತ್ತದೆ ಎಂದು ಪೇನ್ ಹೇಳಿದ್ದಾರೆ.

ಈ ಪ್ರಸ್ತಾವದಲ್ಲಿ ಕೊರೊನಾ ವೈರಸ್ ಏಕಾಏಕಿ ಪ್ರಾರಂಭವಾಯಿತು ಎಂದು ನಂಬಲಾದ ಚೀನಾ ಅಥವಾ ವುಹಾನ್ ನಗರದ ಬಗ್ಗೆ ಯಾವುದೇ ಉಲ್ಲೇಖ ಕಂಡುಬಂದಿಲ್ಲ. ಐರೋಪ್ಯ ಒಕ್ಕೂಟದ ದೇಶಗಳ ಹೊರತಾಗಿ ಜಪಾನ್, ಬ್ರಿಟನ್, ನ್ಯೂಜಿಲೆಂಡ್, ದಕ್ಷಿಣ ಕೊರಿಯಾ, ಬ್ರೆಜಿಲ್ ಮತ್ತು ಕೆನಡಾಗಳು ಕರಡನ್ನು ಬೆಂಬಲಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು