ಸೋಮವಾರ, ಫೆಬ್ರವರಿ 17, 2020
16 °C

ಕೊರೊನಾ ವೈರಸ್ ಎಫೆಕ್ಟ್: ಚೀನಾ ಪ್ರಜೆಗಳಿಗೆ ಭಾರತದ ಇ-ವೀಸಾ ತಾತ್ಕಾಲಿಕ ನಿಷೇಧ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬೀಜಿಂಗ್: ಕೊರೊನಾ ವೈರಸ್ ಪರಿಣಾಮ ಚೀನಿಯರು ಹಾಗೂ ಚೀನಾದಲ್ಲಿ ನೆಲೆಸಿರುವ ಇತರೆ ಯಾವುದೇ ದೇಶದ ಪ್ರವಾಸಿಗರಿಗೆ ಭಾರತ ಭಾನುವಾರ ತಾತ್ಕಾಲಿಕ ನಿಷೇಧ ಹೇರಿದೆ.

ಬೀಜಿಂಗ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಪ್ರಸ್ತುತ ಬೆಳವಣಿಗೆಗಳಿಂದಾಗಿ ಭಾರತಕ್ಕೆ ತೆರಳಲು ನೀಡುವ ಇ-ವೀಸಾವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಈ ನಿಯಮ ಚೀನಿಯರು ಹಾಗೂ ಚೀನಾದಲ್ಲಿರುವ ಇತರೆ ದೇಶಗಳ ನಿವಾಸಿಗಳಿಗೂ ಅನ್ವಯಿಸುತ್ತದೆ. ಈಗಾಗಲೇ ನೀಡಲಾಗಿರುವ ಇ-ವೀಸಾಗಳಿಗೆ ದೀರ್ಘಕಾಲದ ಮಾನ್ಯತೆ ಇರುವುದಿಲ್ಲ ಎಂದು ತಿಳಿಸಿದೆ.

ಭಾರತಕ್ಕೆ ಭೇಟಿ ನೀಡಲೇಬೇಕು ಎಂದು ಬಯಸುವ ಚೀನಾ ನಿವಾಸಿಗಳು ಅಥವಾ ಚೀನಾದಲ್ಲಿರುವ ಇತರೆ ದೇಶಗಳ ಪ್ರಜೆಗಳು ಬೀಜಿಂಗ್‌, ಶಾಂಗೈ ಅಥವಾ ಗುವಾಂಗ್ಜೊ ನಗರಗಳ ಭಾರತೀಯ ರಾಯಭಾರ ಕಚೇರಿಗಳಿಗೆ ಭೇಟಿ ನೀಡಿ ವೀಸಾಗಾಗಿ ಹೊಸದಾಗಿ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ.

ಇದನ್ನೂ ಓದಿ: ಏನಿದು ಕೊರೊನಾ ವೈರಸ್? ಸೋಂಕು ತಿಳಿಯುವುದು ಹೇಗೆ? ಮುನ್ನೆಚ್ಚರಿಕೆ ಕ್ರಮಗಳು ಏನು?

ಕೊರೊನಾ ವೈರಸ್‌‌‌‌ನಿಂದ ನಲುಗಿರುವ ಚೀನಾದಿಂದ 7 ಮಂದಿ ಮಾಲ್ಡೀವ್ ಪ್ರಜೆಗಳೂ ಸೇರಿದಂತೆ 323 ಮಂದಿ ಭಾರತೀಯರನ್ನು ಒಳಗೊಂಡ ಎರಡನೇ ತಂಡವನ್ನು ಭಾನುವಾರ ವಿಮಾನದ ಮೂಲಕ ಕರೆತರಲಾಗಿದೆ. ಶನಿವಾರ ಬೆಳಗಿನ ಜಾವ 324 ಮಂದಿ ಭಾರತೀಯರನ್ನು ಒಳಗೊಂಡ ಮೊದಲ ತಂಡ ಭಾರತಕ್ಕೆ ಕರೆತರಲಾಗಿದೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು