ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ವಾಸ್ತವ ಸಂಗತಿ ಪ್ರಚಾರಕ್ಕೆ ಕೈಜೋಡಿಸಿದ ಭಾರತ

ಸುಳ್ಳು ಮಾಹಿತಿ ವಿರುದ್ಧ ಹೋರಾಟ
Last Updated 14 ಜೂನ್ 2020, 7:23 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಕೋವಿಡ್‌–19 ಕುರಿತಂತೆ ಜಗತ್ತಿಗೆ ಸತ್ಯ ಸಂಗತಿಗಳನ್ನು ತಿಳಿಸಲು 132 ದೇಶಗಳು ಒಟ್ಟಾಗಿ ಆರಂಭಿಸಿರುವ ಉಪಕ್ರಮಕ್ಕೆ ಭಾರತವೂ ಕೈಜೋಡಿಸಿದೆ.

ಕೊರೊನಾ ವೈರಸ್‌, ಇದರಿಂದ ಹರಡುವ ಸೋಂಕು ಕುರಿತು ಹಬ್ಬಿಸಲಾಗುತ್ತಿರುವ ತಪ್ಪು, ತಿರುಚಿದ ಮಾಹಿತಿ ವಿರುದ್ಧ ಈ ದೇಶಗಳು ಒಟ್ಟಾಗಿ ಹೋರಾಡಲು ಮುಂದಾಗಿವೆ. ಇಂತಹ ತಪ್ಪು ಮಾಹಿತಿಯನ್ನು ‘ಇನ್ಫೋಡೆಮಿಕ್‌’ ಅಂದರೆ, ‘ಕೋವಿಡ್‌ ಪಿಡುಗು ಕುರಿತ ತಿರುಚಿದ ಮಾಹಿತಿ’ ಎಂದು ಹೆಸರಿಸಲಾಗಿದೆ.

‘ಇನ್ಫೋಡೆಮಿಕ್‌’ ವಿರುದ್ಧ ಆಸ್ಟ್ರೇಲಿಯಾ, ಚಿಲಿ, ಫ್ರಾನ್ಸ್‌, ಜಾರ್ಜಿಯಾ, ಇಂಡೊನೇಷ್ಯಾ, ಲೆಬನಾನ್‌, ನಾರ್ವೆ ಸೇರಿದಂತೆ 132 ದೇಶಗಳು ಹೋರಾಟಕ್ಕೆ ಮುಂದಾಗಿವೆ.

‘ಕೋವಿಡ್‌–19 ವಿರುದ್ಧದ ಹೋರಾಟದ ಜೊತೆಗೆ, ಈ ಪಿಡುಗು ಕುರಿತ ತಪ್ಪು ಮಾಹಿತಿ ಪ್ರಸಾರ, ಹಾನಿ ಉಂಟು ಮಾಡುವ ಆರೋಗ್ಯ ಸಲಹೆಗಳು, ದ್ವೇಷ ಭಾಷಣ, ಸಂಚಿನ ಭಾಗವಾಗಿ ಈ ಸೋಂಕು ಹರಡಿಸಲಾಗುತ್ತಿದೆ ಎಂಬಂಥ ಸುಳ್ಳು ಪ್ರಚಾರದ ವಿರುದ್ಧ ಹೋರಾಟ ಅಗತ್ಯ’ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್‌ ಹೇಳಿದ್ದಾರೆ.

‘ಕೋವಿಡ್‌ ಪಿಡುಗನ್ನೇ ನೆಪವಾಗಿಟ್ಟುಕೊಂಡು ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದು ಹೀಗೇ ಮುಂದುವರಿದರೆ ಆರ್ಥಿಕತೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಹಾಳಾಗಲಿದೆ’ ಎಂದು ವಿಶ್ವಸಂಸ್ಥೆಯ ಜಾಗತಿಕ ಸಂವಹನ ವಿಭಾಗದ ಮಹಾ ಕಾರ್ಯದರ್ಶಿ ಮೆಲಿಸ್ಸಾ ಫ್ಲೆಮಿಂಗ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT