ಭಾನುವಾರ, ಸೆಪ್ಟೆಂಬರ್ 26, 2021
22 °C

19 ಭಾರತೀಯರ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಅಬುಜಾ: ಕಳೆದ ತಿಂಗಳು ಆಫ್ರಿಕಾದ ಪಶ್ಚಿಮ ಸಮುದ್ರದಲ್ಲಿ ಕಡಲ್ಗಳ್ಳರು ಅಪಹರಿಸಿದ್ದ ಭಾರತದ ವಾಣಿಜ್ಯ ನೌಕೆಯ 20 ಸಿಬ್ಬಂದಿಯ ಪೈಕಿ 19 ಜನರು ಬಿಡುಗಡೆಯಾಗಿದ್ದಾರೆ. ಕಡಲ್ಗಳ್ಳರ ವಶದಲ್ಲಿದ್ದಾಗ ಒಬ್ಬರ ಸಾವು ಸಂಭವಿಸಿದೆ.

ಕಳೆದ ಡಿ.15ರಂದು ಸಿಬ್ಬಂದಿಯನ್ನು ಕಡಲ್ಗಳ್ಳರು ಅಪಹರಿಸಿದ್ದರು. 19 ಸಿಬ್ಬಂದಿಯನ್ನು ಬಿಡಿಸಿಕೊಂಡು ಬಂದ ನೈಜೀರಿಯಾ ಸರ್ಕಾರಕ್ಕೆ ಭಾರತ ಕೃತಜ್ಞತೆ ಸಲ್ಲಿಸಿದೆ.

ಭಾರತ ಸರ್ಕಾರ ಎಲ್ಲ 20 ಸಿಬ್ಬಂದಿಯನ್ನು ಸುರಕ್ಷಿತವಾಗಿ ಕರೆತರಲು ಆದ್ಯತೆ ನೀಡಿತ್ತು. ಆದರೆ ಒಬ್ಬರ ಸಾವು ತೀವ್ರ ನೋವುಂಟು ಮಾಡಿದೆ ಭಾರತೀಯ ರಾಯಭಾರ ಕಚೇರಿ ಟ್ವೀಟ್‌ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು