ಶುಕ್ರವಾರ, ಆಗಸ್ಟ್ 6, 2021
25 °C

ಐಎನ್‌ಎಸ್ ಜಲಾಶ್ವ ಮೂಲಕ ಭಾರತಕ್ಕೆ ಬರಲಿದ್ದಾರೆ ವಿದೇಶದಲ್ಲಿದ್ದ 700 ಪ್ರಯಾಣಿಕರು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ಕೊಲಂಬೊ: ಕೊರೊನಾ ವೈರಸ್‌ ಲಾಕ್‌ಡೌನ್‌ನಿಂದಾಗಿ ವಿದೇಶದಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ವಾಪಸ್ ಕರೆತರುವ ವಂದೇ ಭಾರತ್‌ ಮಿಷನ್‌ ಕಾರ್ಯಾಚರಣೆ ಅಂಗವಾಗಿ 'ಸಮುದ್ರ ಸೇತು' ಕಾರ್ಯಾಚರಣೆಯ ಎರಡನೇ ಹಂತದ ಅಡಿಯಲ್ಲಿ ಭಾರತೀಯ ನೌಕಾಪಡೆಯ ಹಡಗು ಐಎನ್ಎಸ್ ಜಲಾಶ್ವ 700 ಭಾರತೀಯರೊಂದಿಗೆ ಭಾರತಕ್ಕೆ ಪ್ರಯಾಣ ಬೆಳೆಸಲಿದೆ.

ಈ ಹಡಗು ಸೋಮವಾರ ಬೆಳಿಗ್ಗೆ ಕೊಲಂಬೊ ಬಂದರಿಗೆ ತಲುಪಿದ್ದು, ಪ್ರಯಾಣಿಕರೊಂದಿಗೆ ತಮಿಳುನಾಡಿನ ಟುಟಿಕೋರಿನ್‌ಗೆ ತೆರಳಲಿದೆ. ಬಳಿಕ ಮಾಲ್ಡೀವ್ಸ್‌ನಿಂದ ಮತ್ತೆ 700 ಪುರುಷರನ್ನು ತಮಿಳುನಾಡಿನ ಟ್ಯುಟಿಕೋರಿನ್‌ಗೆ ಬಿಟ್ಟು ಬರಲಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.

ಇದನ್ನೂ ಓದಿ:

ಬಂದರು ಒಡ್ಡು (ಜೆಟ್ಟಿ) ಸೇವೆಯ ಮೂಲಕ ಉಭಯಚರ ಸಾರಿಗೆ ಡಾಕ್ ಕೊಲಂಬೊದಲ್ಲಿ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಿದ್ದು, ಅದು ಹಡಗಿನಲ್ಲಿ ಸ್ಥಳಾಂತರಿಸುವವರಿಗೆ ಅನುಕೂಲವಾಗುತ್ತದೆ.

ಸದ್ಯದ ಅವಶ್ಯಕತೆಗಳಾದ ಅಂತರ ಕಾಯ್ದುಕೊಳ್ಳುವುದು ಮತ್ತು ಆರೋಗ್ಯ ಶಿಷ್ಟಾಚಾರಗಳನ್ನು ಕಾಯ್ದುಕೊಳ್ಳುವ ಮೂಲಕ ಹಡಗನ್ನು ನಿರ್ದಿಷ್ಟವಾಗಿ ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳೆಂದು ವಿಂಗಡಿಸಲಾಗಿದೆ.

ಐಎನ್‌ಎಸ್ ಜಲಶ್ವಾ ಕಾರ್ಯನಿರ್ವಾಹಕ ಅಧಿಕಾರಿ ಕಮಾಂಡರ್ ಗೌರವ್ ದುರ್ಗಪಾಲ್ ಮಾತನಾಡಿ, ಕೋವಿಡ್-19 ವಿರುದ್ಧದ ಸುರಕ್ಷತೆಗಾಗಿ ಮಾರ್ಗಸೂಚಿಗಳು ಮತ್ತು ಅದಕ್ಕಾಗಿ ನೌಕಾ ಕೇಂದ್ರ ಕಚೇರಿ ಮತ್ತು ಕಮಾಂಡರ್‌ಗಳು ತೆಗೆದುಕೊಳ್ಳಬೇಕಿರುವ ಕ್ರಮಗಳನ್ನು ಪ್ರಕಟಿಸುತ್ತಿವೆ ಎಂದು ತಿಳಿಸಿದ್ದಾರೆ.

ಸ್ಥಳಾಂತರಿಸುವ ಉದ್ದೇಶದಿಂದ ಸಂಪೂರ್ಣ ಹಡಗನ್ನು ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಕೆಂಪು ವಲಯವು ನಾವು ಸ್ಥಳಾಂತರಿಸುವ ಎಲ್ಲರಿಗೂ ಸ್ಥಳಾವಕಾಶ ಕಲ್ಪಿಸುವ ಪ್ರದೇಶವಾಗಿದೆ. ಕಿತ್ತಳೆ ವಲಯವು ಜನರನ್ನು ಸ್ಥಳಾಂತರಿಸುವ ಬಗ್ಗೆ ಕಾಳಜಿ ವಹಿಸಲು ಮೀಸಲಾದ ತಂಡಕ್ಕಾಗಿರುತ್ತದೆ ಮತ್ತು ಅಧಿಕಾರಿಗಳು ಮತ್ತು ನಾವಿಕರು ಉಳಿದುಕೊಂಡಿರುವುದು ಹಸಿರು ವಲಯ ಎಂದು ಮಾಹಿತಿ ನೀಡುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು