ಗುರುವಾರ , ಜುಲೈ 16, 2020
22 °C

ದುರಂತಕ್ಕೀಡಾದ ಪಾಕಿಸ್ತಾನ ವಿಮಾನದ ಅವಶೇಷದಲ್ಲಿ ಸಿಕ್ತು ₹3 ಕೋಟಿ ನಗದು!

ಪಿಟಿಐ Updated:

ಅಕ್ಷರ ಗಾತ್ರ : | |

Trade union and civil society activists light candles in Karachi on May 28, 2020, during a candlelight vigil for the victims of the Pakistan International Airlines (PIA) plane crash on May 22. (AFP Photo)

ಕರಾಚಿ: ಕಳೆದ ವಾರ ದುರಂತಕ್ಕೀಡಾಗಿದ್ದ ಪಾಕಿಸ್ತಾನ ವಿಮಾನದ ಅವಶೇಷಗಳಲ್ಲಿದ್ದ ಚೀಲಗಳಿಂದ ತನಿಖಾಧಿಕಾರಿಗಳಿಗೆ ₹3 ಕೋಟಿ ನಗದು ದೊರೆತಿದೆ. ವಿವಿಧ ದೇಶಗಳ ಕರೆನ್ಸಿಗಳನ್ನು ಒಳಗೊಂಡ ನಗದು ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ಹೊರತಾಗಿಯೂ ಇಷ್ಟೊಂದು ದೊಡ್ಡ ಮೊತ್ತದ ನಗದನ್ನು ವಿಮಾನದೊಳಗೆ ಕೊಂಡೊಯ್ಯುವುದು ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಅವಶೇಷಗಳಲ್ಲಿ ಇದ್ದ 2 ಚೀಲಗಳಿಂದ ಈ ನಗದು ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತದೇಹಗಳನ್ನು ಗುರುತಿಸುವುದು, ಮೃತರ ಸ್ವತ್ತುಗಳನ್ನು ಪತ್ತೆ ಹಚ್ಚುವುದು ಹಾಗೂ ಅವರ ಕುಟುಂಬದವರಿಗೆ ಹಸ್ತಾಂತರಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ನೋಡಿ: ಪಾಕ್‌‌ ವಿಮಾನ ಪತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಈ ಮಧ್ಯೆ, ದುರಂತಕ್ಕೀಡಾದ ವಿಮಾನದ  ಕಾಕ್‌ಪಿಟ್‌ ವಾಯ್ಸ್ ರೆಕಾರ್ಡರ್ ಪತ್ತೆಹಚ್ಚುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಪೈಲಟ್‌ಗಳ ನಡುವಿನ ಸಂಭಾಷಣೆಯನ್ನು ತಿಳಿಯಲು ಇದು ನೆರವಾಗಲಿದೆ. ಈ ಮೂಲಕ ವಿಮಾನ ಪತನಕ್ಕೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುವಲ್ಲಿ ಕಾಕ್‌ಪಿಟ್‌ ಮುಖ್ಯ ಪಾತ್ರ ವಹಿಸಲಿದೆ.

ಕಳೆದ ಶುಕ್ರವಾರ ಪಾಕಿಸ್ತಾನದ ವಿಮಾನವು ಕರಾಚಿಯ ಜನವಸತಿ ಪ್ರದೇಶದಲ್ಲಿ ಪತನಗೊಂಡು 97 ಮಂದಿ ಮೃತಪಟ್ಟಿದ್ದರು. ಇಬ್ಬರು ಪವಾಡಸದೃಶರಾಗಿ ಪಾರಾಗಿದ್ದರು.

ಇನ್ನಷ್ಟು...

ಪಾಕ್‌ ವಿಮಾನ ದುರಂತದಲ್ಲಿ 97 ಮಂದಿ ಸಾವು: ಇಬ್ಬರು ಪಾರು 

ಕರಾಚಿ ವಿಮಾನ ಅಪಘಾತ: ಎಚ್ಚರಿಕೆ ಕಡೆಗಣಿಸಿದ್ದ ಪೈಲಟ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು