ಭಾನುವಾರ, ಜನವರಿ 26, 2020
25 °C

ಇರಾಕ್‌ನಲ್ಲಿ ಅಮೆರಿಕದ 6,000 ಯೋಧರು

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

prajavani

ಉಗ್ರಗಾಮಿಗಳ ವಿರುದ್ಧ ಹೋರಾಡಲು ಇರಾಕ್‌ ಸೈನಿಕರಿಗೆ ತರಬೇತಿ ನೀಡುವ ಸಲುವಾಗಿ ಅಮೆರಿಕ ನೇತೃತ್ವದಲ್ಲಿ ಮಿತ್ರಪಡೆಗಳ ಸೈನಿಕರು ಹಲವು ವರ್ಷಗಳಿಂದ ಇರಾಕ್‌ನಲ್ಲಿ ನೆಲೆಯೂರಿದ್ದಾರೆ. ಆರು ಸಾವಿರಕ್ಕೂ ಹೆಚ್ಚು ಅಮೆರಿಕ ಸೈನಿಕರು ಇಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇರಾಕ್‌ನ ಪರಿಸ್ಥಿತಿ ಸುಧಾರಿಸಿರುವ ಕಾರಣಕ್ಕೆ ಅಮೆರಿಕವು ತನ್ನ ಪಡೆಗಳನ್ನು ಹಿಂಪಡೆಯಲಿದೆ ಎಂದು ಕೆಲವು ವರ್ಷಗಳ ಹಿಂದೆ ನಿರೀಕ್ಷಿಸಲಾಗಿತ್ತು. ಅಮೆರಿಕದ ಸೇನೆ ವಾಪಸ್‌ ಹೋಗಬೇಕು ಎಂದು ಇರಾಕ್‌ನ ಸಂಸತ್ತು ಈಚೆಗೆ ನಿರ್ಣಯವನ್ನೂ ಅಂಗೀಕರಿಸಿತ್ತು. ಆದರೆ ಮಂಗಳವಾರ ಶ್ವೇತಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ನಮ್ಮ ಸೈನಿಕರನ್ನು ವಾಪಸ್‌ ಕರೆಯಿಸಿಕೊಳ್ಳಲು ಇದು ಸರಿಯಾದ ಕಾಲವಲ್ಲ’ ಎಂದಿದ್ದರು.

ಇರಾಕ್‌ನಲ್ಲಿ ಅಮೆರಿಕದ ಬಹುದೊಡ್ಡ ಸೇನಾ ನೆಲೆ ಇರುವುದು ಐನ್‌ ಅಲ್‌–ಅಸಾದ್‌ನಲ್ಲಿ. 2003– 2011ರ ಅವಧಿಯಲ್ಲಿ ಅಮೆರಿಕವು ಈ ನೆಲೆಯನ್ನು ಸ್ಥಾಪಿಸಿತ್ತು.

2011ರಲ್ಲಿ ಅಮೆರಿಕವು ತನ್ನ ಸೇನೆಯನ್ನು ಇಲ್ಲಿಂದ ವಾಪಸ್‌ ಕರೆಯಿಸಿಕೊಂಡಿತ್ತು. ಆದರೆ, ಇರಾಕ್‌ ಸೈನಿಕರಿಗೆ ಭಯೋತ್ಪಾದಕರ ವಿರುದ್ಧ ಹೋರಾಡುವ ತರಬೇತಿ ನೀಡುವ ಸಲುವಾಗಿ ನೂರಾರು ಸೈನಿಕರು, ಸಲಹೆಗಾರರನ್ನು ಇಲ್ಲಿ ಉಳಿಸಲಾಗಿತ್ತು. ಜತೆಗೆ ಅಮೆರಿಕ ನೇತೃತ್ವದ ಮೈತ್ರಿಪಡೆಯ ಸೈನಿಕರನ್ನೂ ಇಲ್ಲಿ ನಿಯುಕ್ತಿಗೊಳಿಸಲಾಗಿತ್ತು.

2018ರ ಕ್ರಿಸ್‌ಮಸ್‌ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್‌ ಇಲ್ಲಿಗೆ ಭೇಟಿನೀಡಿದ್ದರು. ಅಧಿಕಾರ ವಹಿಸಿಕೊಂಡ ನಂತರ ಮೊದಲಬಾರಿ ಇಲ್ಲಿಗೆ ಬಂದಿದ್ದ ಅವರಿಗೆ ಭವ್ಯ ಸ್ವಾಗತ ಕೋರಲಾಗಿತ್ತು.

ಅಮೆರಿಕದ ಇನ್ನೊಂದು ಪ್ರಮುಖ ಸೇನಾ ನೆಲೆ ಇರುವುದು ಎರ್ಬಿಲ್‌ ಪಟ್ಟಣದಲ್ಲಿ. ಇದು ಖುರ್ದ್‌ ಪ್ರದೇಶದ ವಿಮಾನ ನಿಲ್ದಾಣದ ಸಮೀಪದಲ್ಲಿದೆ.

2011ರಲ್ಲಿ ಇರಾಕ್‌ನಲ್ಲಿ ಅಮೆರಿಕದ ಸುಮಾರು 1.50 ಲಕ್ಷ ಸೈನಿಕರು ಇದ್ದರು. ಆದರೆ ಆನಂತರ ಬಹುತೇಕ ಎಲ್ಲಾ ಸೈನಿಕರನ್ನೂ ವಾಪಸ್‌ ಕರೆಯಿಸಿಕೊಳ್ಳಲಾಗಿತ್ತು. ಆದರೆ ಇತ್ತೀಚೆಗೆ ಸೈನಿಕರ ಸಂಖ್ಯೆಯನ್ನು ಮತ್ತೆ 5,000ಕ್ಕೆ ಹೆಚ್ಚಿಸಿಕೊಳ್ಳಲಾಗಿತ್ತು. ಅದಲ್ಲದೆ, ಸಿರಿಯಾದಲ್ಲಿದ್ದ 1,000 ಸೈನಿಕರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿತ್ತು, ಅದರಿಂದಾಗಿ 2019ರ ಅಕ್ಟೋಬರ್‌ ವೇಳೆಗೆ ಇರಾಕ್‌ನಲ್ಲಿರುವ ಅಮೆರಿಕದ ಸೈನಿಕರ ಸಂಖ್ಯೆ 6,000 ಆಗಿತ್ತು.

‘ಪ್ರತೀಕಾರ ಇನ್ನಷ್ಟೇ ಆಗಬೇಕು’

‘ಕ್ಷಿಪಣಿ ದಾಳಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ’ ಎಂದು ಇರಾನ್‌ನ ವಿದೇಶಾಂಗ ಸಚಿವ ಮೊಹಮ್ಮದ್‌ ಜಾವೇದ್‌ ಝರೀಫ್‌ ಹೇಳಿದ್ದಾರೆ. ಆದರೆ, ರಾಷ್ಟ್ರದ ಸರ್ವೋಚ್ಚ ನಾಯಕ ಅಯಾತ್‌ಉಲ್ಲಾ ಅಲಿ ಖೊಮೇನಿ, ‘ಇದು ಅಮೆರಿಕಕ್ಕೆ ಮಾಡಿರುವ ಕಪಾಳಮೋಕ್ಷ’ ಎಂದು ಸರ್ಕಾರಿ ಟಿ.ವಿ. ವಾಹಿನಿ ಮೂಲಕ ನೀಡಿರುವ ಸಂದೇಶದಲ್ಲಿ ಹೇಳಿದ್ದಾರೆ.

‘ಅಮೆರಿಕವು ಮಾಡಿರುವ ಕೃತ್ಯಕ್ಕೆ ಇಂಥ ಕ್ಷಿಪಣಿ ದಾಳಿಯು ಸರಿಯಾದ ಪ್ರತೀಕಾರವಲ್ಲ. ಪ್ರತೀಕಾರ ಇನ್ನಷ್ಟೇ ಬರಬೇಕಿದೆ. ಮುಖ್ಯ ವಿಚಾರವೆಂದರೆ, ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಭ್ರಷ್ಠ ಅಸ್ತಿತ್ವವನ್ನೇ ಕೊನೆಗೊಳಿಸಬೇಕಾಗಿದೆ’ ಎಂದು ಖೊಮೇನಿ ಹೇಳಿದ್ದಾರೆ.

‘ಅಮೆರಿಕವು ನಡೆಸುವ ಪ್ರತಿ ದಾಳಿಗೂ ತಕ್ಕ ಉತ್ತರ ನೀಡಲಾಗುವುದು’ ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಪಡೆ ಹೇಳಿದೆ.

ವಿಮಾನ ಮಾರ್ಗ ಬದಲು

ಇರಾನ್‌ನಲ್ಲಿ ಉಂಟಾಗಿರುವ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ ಬಹುತೇಕ ಎಲ್ಲಾ ನಾಗರಿಕ ವಿಮಾನಯಾನ ಸಂಸ್ಥೆಗಳು ಇರಾನ್‌ ಮತ್ತು ಇರಾಕ್‌ ವಾಯು ಮಾರ್ಗ ಬಳಕೆಯನ್ನು ಸ್ಥಗಿತಗೊಳಿಸಿವೆ.

ದಾಳಿ ನಡೆಯುವ ಸಾಧ್ಯತೆ ಇರುವುದರಿಂದ, ಇರಾಕ್‌, ಇರಾನ್‌ ಹಾಗೂ ಕೊಲ್ಲಿ ವಾಯು ಪ್ರದೇಶದಲ್ಲಿ ಹಾರಾಟ ನಡೆಸುವುದಕ್ಕೆ ಅಮೆರಿಕದ ವಿಮಾನಯಾನ ನಿಯಂತ್ರಣ ಪ್ರಾಧಿಕಾರವು ಎಲ್ಲಾ ವಿಮಾನ ಸಂಸ್ಥೆಗಳಿಗೆ ನಿಷೇಧ ವಿಧಿಸಿದೆ.

ಏರ್‌ ಫ್ರಾನ್ಸ್‌ ಸಂಸ್ಥೆಯು ಈ ವಾಯು ಮಾರ್ಗದ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ ಎಂದು ಸಂಸ್ಥೆಯ ವಕ್ತಾರ ತಿಳಿಸಿದ್ದಾರೆ.

ಈ ಮಾರ್ಗದ ಪ್ರಯಾಣವನ್ನು ತಪ್ಪಿಸುವಂತೆ ವಿಮಾನ ಯಾನ ಸಂಸ್ಥೆಗಳಿಗೆ ರಷ್ಯಾ ಸಲಹೆ ನೀಡಿದೆ. ಯುರೋಪ್‌– ಏಷ್ಯಾವನ್ನು ಸಂಪರ್ಕಿಸುವ ನಿಟ್ಟಿನಲ್ಲಿ ಈ ಮಾರ್ಗವು ಬಹು ಮುಖ್ಯವಾಗಿದೆ.

ಟೆಹರಾನ್‌ಗೆ ದೈನಂದಿನ ವಿಮಾನವನ್ನು ರದ್ದುಪಡಿಸುವುದಾಗಿ ಜರ್ಮನಿಯ ಲುಫ್ತಾನ್ಸಾ ವಿಮಾನ ಸಂಸ್ಥೆ ಹೇಳಿದೆ. ಮಾತ್ರವಲ್ಲದೆ, ಇರಾನ್‌ ಅಥವಾ ಇರಾಕ್‌ನಲ್ಲಿ ರಾತ್ರಿ ವೇಳೆಯಲ್ಲಿ ತಂಗುವುದನ್ನೂ ಸ್ಥಗಿತಗೊಳಿಸುವುದಾಗಿ ಹೇಳಿದೆ. ಯುಎಇಯ ಎಮಿರೇಟ್ಸ್‌ ವಿಮಾನ ಸಂಸ್ಥೆಯೂ ಬಾಗ್ದಾದ್‌ ಮೇಲಿನ ಹಾರಾಟವನ್ನು ರದ್ದುಪಡಿಸಿದೆ.

ಆಸ್ಟ್ರೇಲಿಯಾ– ಲಂಡನ್‌ ನಡುವಿನ ವಿಮಾನ ಮಾರ್ಗವನ್ನು ಬದಲಿಸಲಾಗಿದೆ ಎಂದು ಆಸ್ಟ್ರೇಲಿಯಾ ಹೇಳಿದೆ. ಇಂಥದ್ದೇ ತೀರ್ಮಾನ ಕೈಗೊಳ್ಳುವುದಾಗಿ ಮಲೇಷಿಯಾ ಮತ್ತು ಸಿಂಗಪುರ ವಿಮಾನಯಾನ ಸಂಸ್ಥೆಗಳೂ ಹೇಳಿವೆ. ತಮ್ಮ ಎಲ್ಲಾ ವಿಮಾನಗಳ ದಾರಿಯನ್ನು ಬದಲಿಸಲಾಗಿದೆ ಎಂದು ಪೋಲೆಂಡ್‌ ಈಗಾಗಲೇ ಹೇಳಿದೆ.

‘ಭಾರತದ ಏರ್‌ ಇಂಡಿಯಾ ಸಂಸ್ಥೆಯೂ ಇರಾನ್‌ ವಾಯುಪ್ರದೇಶದನ್ನು ಬಳಸಿ ಹೋಗುತ್ತಿದ್ದ ಎಲ್ಲಾ ವಿಮಾನಗಳ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಿಸಿದೆ’ ಎಂದು ಸಂಸ್ಥೆಯ ವಕ್ತಾರ ಧನಂಜಯ್‌ ಕುಮಾರ್‌ ತಿಳಿಸಿದ್ದಾರೆ. ಇರಾನ್‌, ಇರಾಕ್‌ ದೇಶಗಳ ಭೇಟಿಯನ್ನು ರದ್ದುಪಡಿಸುವಂತೆಯೂ ಹಲವು ರಾಷ್ಟ್ರಗಳು ತಮ್ಮ ನಾಗರಿಕರಿಗೆ ಸಲಹೆ ನೀಡಿವೆ.

ಹಿಂದೆ ಸರಿಯಲು ಅಮೆರಿಕ ನಿರಾಕರಣೆ

ಜಿಹಾದಿಗಳ ವಿರುದ್ಧ ಹೋರಾಡಲು ಇರಾಕ್‌ ಸೈನಿಕರಿಗೆ ತರಬೇತಿ ನೀಡುವ ಸಲುವಾಗಿ ಅಮೆರಿಕ ನೇತೃತ್ವದಲ್ಲಿ ಮಿತ್ರಪಡೆಗಳ ಸೈನಿಕರು ಹಲವು ವರ್ಷಗಳಿಂದ ಇರಾಕ್‌ನಲ್ಲಿ ನೆಲೆಯೂರಿದ್ದಾರೆ.

ಇರಾಕ್‌ನ ಪರಿಸ್ಥಿತಿ ಸುಧಾರಿಸಿರುವ ಕಾರಣಕ್ಕೆ ಅಮೆರಿಕವು ತನ್ನ ಪಡೆಗಳನ್ನು ಹಿಂಪಡೆಯಲಿದೆ ಎಂದು ಕೆಲವು ವರ್ಷಗಳ ಹಿಂದೆ ನಿರೀಕ್ಷಿಸಲಾಗಿತ್ತು. ಅಮೆರಿಕದ ಸೇನೆ ವಾಪಸ್‌ ಹೋಗಬೇಕು ಎಂದು ಇರಾಕ್‌ನ ಸಂಸತ್ತು ಈಚೆಗೆ ನಿರ್ಣಯವನ್ನೂ ಅಂಗೀಕರಿಸಿತ್ತು. ಆದರೆ ಮಂಗಳವಾರ ವೈಟ್‌ಹೌಸ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ನಮ್ಮ ಸೈನಿಕರನ್ನು ವಾಪಸ್‌ ಕರೆಯಿಸಿಕೊಳ್ಳಲು ಇದು ಸರಿಯಾದ ಕಾಲವಲ್ಲ’ ಎಂದಿದ್ದರು.

6000ಕ್ಕೂ ಹೆಚ್ಚು ಸೈನಿಕರು: ಇರಾಕ್‌ನಲ್ಲಿ ಅಮೆರಿಕದ ಬಹುದೊಡ್ಡ ಸೇನಾ ನೆಲೆ ಇರುವುದು ಏಯಿನ್‌ ಅಲ್‌–ಅಸಾದ್‌ನಲ್ಲಿ. 2003– 2011ರ ಅವಧಿಯಲ್ಲಿ ಅಮೆರಿಕವು ಈ ನೆಲೆಯನ್ನು ಸ್ಥಾಪಿಸಿತ್ತು.

2011ರಲ್ಲಿ ಅಮೆರಿಕವು ತನ್ನ ಸೇನೆಯನ್ನು ಇಲ್ಲಿಂದ ವಾಪಸ್‌ ಕರೆಯಿಸಿಕೊಂಡಿತ್ತು. ಆದರೆ, ಇರಾಕ್‌ ಸೈನಿಕರಿಗೆ ಭಯೋತ್ಪಾದಕರ ವಿರುದ್ಧ ಹೋರಾಡುವ ತರಬೇತಿ ನೀಡುವ ಸಲುವಾಗಿ ನೂರಾರು ಸೈನಿಕರು ಹಾಗೂ ಸಲಹೆಗಾರರನ್ನು ಇಲ್ಲಿ ಉಳಿಸಲಾಗಿತ್ತು. ಜತೆಗೆ ಅಮೆರಿಕ ನೇತೃತ್ವದ ಮೈತ್ರಿಪಡೆಯ ಸೈನಿಕರನ್ನೂ ಇಲ್ಲಿ ನಿಯುಕ್ತಿಗೊಳಿಸಲಾಗಿತ್ತು.

2016ರಲ್ಲಿ ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಸಂಘಟನೆಯು ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ಆರಂಭಿಸಿತ್ತು. ಕಳೆದ ತಿಂಗಳಲ್ಲಿ ಐದು ರಾಕೆಟ್‌ಗಳು ಈ ಸೇನಾ ನೆಲೆಯ ಮೇಲೆ ಬಂದು ಬಿದ್ದಿದ್ದವು. ಆದರೆ ಯಾರೂ ಹತರಾಗಿರಲಿಲ್ಲ.

2018ರ ಕ್ರಿಸ್‌ಮಸ್‌ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್‌ ಇಲ್ಲಿಗೆ ಭೇಟಿನೀಡಿದ್ದರು. ಅಧಿಕಾರ ವಹಿಸಿಕೊಂಡ ನಂತರ ಮೊದಲಬಾರಿ ಇಲ್ಲಿಗೆ ಬಂದಿದ್ದ ಅವರಿಗೆ ಭವ್ಯ ಸ್ವಾಗತ ಕೋರಲಾಗಿತ್ತು.

ಅಮೆರಿಕದ ಇನ್ನೊಂದು ಪ್ರಮುಖ ಸೇನಾ ನೆಲೆ ಇರುವುದು ಅರ್ಬಿಲ್‌ ಪಟ್ಟಣದಲ್ಲಿ. ಇದು ಖುರ್ದಿಷ್‌ ಪ್ರದೇಶದ ವಿಮಾನ ನಿಲ್ದಾಣದ ಸಮೀಪದಲ್ಲಿದೆ.

2011ರಲ್ಲಿ ಇರಾಕ್‌ನಲ್ಲಿ ಅಮೆರಿಕದ ಸುಮಾರು 1.50 ಲಕ್ಷ ಸೈನಿಕರು ಇದ್ದರು. ಆದರೆ ಆನಂತರ ಬಹುತೇಕ ಎಲ್ಲಾ ಸೈನಿಕರನ್ನೂ ವಾಪಸ್‌ ಕರೆಯಿಸಿಕೊಳ್ಳಲಾಗಿತ್ತು. ಆದರೆ ಇತ್ತೀಚೆಗೆ ಸೈನಿಕರ ಸಂಖ್ಯೆಯನ್ನು ಮತ್ತೆ 5000ಕ್ಕೆ ಹೆಚ್ಚಿಸಿಕೊಳ್ಳಲಾಗಿತ್ತು. ಅದಲ್ಲದೆ, ಸಿರಿಯಾದಲ್ಲಿದ್ದ 1000 ಸೈನಿಕರನ್ನು ಇಲ್ಲಿಗೆ ಸ್ಥಳಾಂತರಿಸಲಾಗಿತ್ತು, ಅದರಿಂದಾಗಿ 2019ರ ಅಕ್ಟೋಬರ್‌ ವೇಳೆಗೆ ಇರಾಕ್‌ನಲ್ಲಿರುವ ಅಮೆರಿಕದ ಸೈನಿಕರ ಸಂಖ್ಯೆ 6000 ಆಗಿತ್ತು.

ಡಿಸೆಂಬರ್‌ 31ರಂದು ಬಾಗ್ದಾದ್‌ನಲ್ಲಿ ಅಮೆರಿಕದ ರಾಯಭಾರ ಕಚೇರಿ ಮೇಲೆ ದಾಳಿ ನಡೆದ ಕಾರಣಕ್ಕೆ ಇನ್ನೂ 750 ಸೈನಿಕರನ್ನು ಕಳುಹಿಸಿಕೊಡಲು ಟ್ರಂಪ್‌ ನಿರ್ಧರಿಸಿದರು. ಇದಾದ ಬಳಿಕ ಅಮೆರಿಕವು ಮಧ್ಯಪ್ರಾಚ್ಯಕ್ಕೆ ಹೆಚ್ಚುವರಿಯಾಗಿ 3000 ಸೈನಿಕರನ್ನು ಕಳುಹಿಸಿ ಕೊಟ್ಟಿದೆ. ಆದರೆ ಅದರಲ್ಲಿ ಎಷ್ಟು ಮಂದಿ ಇರಾಕ್‌ಗೆ ಬಂದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

***

* ಇರಾನ್‌ನಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿರುವುದರಿಂದ ಬಹುತೇಕ ಎಲ್ಲಾ ನಾಗರಿಕ ವಿಮಾನಯಾನ ಸಂಸ್ಥೆಗಳು ಇರಾನ್‌ ಮತ್ತು ಇರಾಕ್‌ ವಾಯು ಮಾರ್ಗ ಬಳಕೆಯನ್ನು ನಿಲ್ಲಿಸಿವೆ

* ಇರಾನ್‌, ಇರಾಕ್‌ ದೇಶಗಳ ಭೇಟಿಯನ್ನು ರದ್ದುಪಡಿಸುವಂತೆ ಭಾರತ ಸೇರಿ ಹಲವು ರಾಷ್ಟ್ರಗಳು ತಮ್ಮ ನಾಗರಿಕರಿಗೆ ಸಲಹೆ ನೀಡಿವೆ.

* ‘ಶಾಂತಿ ಕಾಪಾಡುವಲ್ಲಿ ಭಾರತವು ಅತ್ಯುತ್ತಮ ಪಾತ್ರ ವಹಿಸುತ್ತದೆ. ಭಾರತ ನಮ್ಮ ಮಿತ್ರ ರಾಷ್ಟ್ರವೂ ಆಗಿದೆ. ಅಮೆರಿಕ–ಇರಾನ್‌ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತವು ಮುಂದಾಗುವುದಾದರೆ ಅದನ್ನು ಸ್ವಾಗತಿಸುತ್ತೇವೆ’ ಎಂದು ಭಾರತದಲ್ಲಿರುವ ಇರಾನ್‌ ರಾಯಭಾರಿ ಅಲಿ ಚೆಗೆನಿ ಹೇಳಿದ್ದಾರೆ.

* ‘ಶಾಂತಿ ಕಾಪಾಡುವಲ್ಲಿ ಭಾರತವು ಅತ್ಯುತ್ತಮ ಪಾತ್ರ ವಹಿಸುತ್ತದೆ. ಭಾರತ ನಮ್ಮ ಮಿತ್ರ ರಾಷ್ಟ್ರವೂ ಆಗಿದೆ. ಅಮೆರಿಕ–ಇರಾನ್‌ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಾರತವು ಮುಂದಾಗುವುದಾದರೆ ಅದನ್ನು ಸ್ವಾಗತಿಸುತ್ತೇವೆ’ ಎಂದು ಭಾರತದಲ್ಲಿರುವ ಇರಾನ್‌ ರಾಯಭಾರಿ ಅಲಿ ಚೆಗೆನಿ ಹೇಳಿದ್ದಾರೆ

* ‘ಅಮೆರಿಕದ ಮೇಲೆ ಯಾರೇ ದಾಳಿ ನಡೆಸಿದರೂ ಅವರಿಗೆ ತಕ್ಕ ಉತ್ತರ ನೀಡಲಾಗುವುದು’ ಎಂದು ಇಸ್ರೇಲ್‌ನ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಎಚ್ಚರಿಕೆ ನೀಡಿದ್ದಾರೆ

* ‘ತನ್ನ ಸೇನಾ ನಾಯಕನ ಹತ್ಯೆಗೆ ಇರಾನ್‌ ಮೊದಲ ಪ್ರತಿಕ್ರಿಯೆಯನ್ನು ನೀಡಿದೆ. ಇರಾಕ್‌ ಸಹ ಇಂಥದ್ದೇ ಕ್ರಮ ಕೈಗೊಳ್ಳಬೇಕಾದ ಸಮಯ ಬಂದಿದೆ’ ಎಂದು ಇರಾಕ್‌ನ ಸೈಬ್‌ ಅಹಲ್‌ ಅಲ್‌–ಹಕ್‌ ಸಂಘಟನೆಯ ಮುಖ್ಯಸ್ಥ ಖಾಸಿ ಅಲ್‌–ಖಜಲಿ ಹೇಳಿದ್ದಾರೆ. ಈ ಸಂಘಟನೆಗೆ ಇರಾನ್‌ನ ಬೆಂಬಲವಿದ್ದು, ಅಮೆರಿಕವು ಇದನ್ನು ಉಗ್ರಗಾಮಿ ಸಂಘಟನೆ ಎಂದು ಘೋಷಿಸಿದೆ

* ಉದ್ವಿಗ್ನತೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಟರ್ಕಿಯ ವಿದೇಶಾಂಗ ಸಚಿವ ಮೆವ್ಲುಟ್‌ ಚೆವುಸೊಗ್ಲು ಗುರುವಾರ ಇರಾಕ್‌ಗೆ ಭೇಟಿನೀಡಲಿದ್ದಾರೆ. ಅವರು ಈಗಾಗಲೇ ಇರಾನ್‌ನ ವಿದೇಶಾಂಗ ಸಚಿವರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ

* ಇರಾನ್‌ನ ಕ್ರಮವನ್ನು ಖಂಡಿಸಿರುವ ಜರ್ಮನಿಯು, ‘ಇಂಥ ದಾಳಿಯನ್ನು ಮುಂದುವರಿಸಲು ನಾವು ಬಿಡುವುದಿಲ್ಲ’ ಎಂದಿದೆ. ಈ ನಡುವೆ ಬಾಗ್ದಾದ್‌ನಲ್ಲಿದ್ದ ತನ್ನ 32 ಸೈನಿಕರನ್ನು ಮರಳಿ ಕರೆಯಿಸಿಕೊಂಡಿರುವ ಜರ್ಮನಿಯು, ‘ಎರ್ಬಿಲ್‌ ಪಟ್ಟಣದಿಂದ ಸೈನ್ಯವನ್ನು ಭಾಗಶಃ ವಾಪಸ್‌ ಕರೆಯಿಸಿಕೊಳ್ಳುವ ಚಿಂತನೆ ನಡೆದಿದೆ’ ಎಂದಿದೆ.

* ಶಾಂತಿ ಕಾಪಾಡುವಂತೆ ಎಲ್ಲಾ ರಾಷ್ಟ್ರಗಳಿಗೆ ಮನವಿ ಮಾಡಿರುವ ಚೀನಾ, ‘ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಚೀನಾ ಜವಾಬ್ದಾರಿಯುತ ಹೆಜ್ಜೆ ಇಡಲಿದೆ’ ಎಂದಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು