ಗುರುವಾರ , ಜನವರಿ 23, 2020
26 °C

ಕ್ಷಿಪಣಿ ದಾಳಿಯಲ್ಲಿ ಅಮೆರಿಕದ 80 ಉಗ್ರರು ಸತ್ತಿದ್ದಾರೆ: ಇರಾನ್ ಮಾಧ್ಯಮಗಳು 

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

This still image from an Islamic Republic of Iran Broadcasting video shot on January 8, 2020

ದುಬೈ: ಬುಧವಾರ ಬೆಳಗ್ಗೆಇರಾಕ್‌ನಲ್ಲಿರುವ ಅಮೆರಿಕ ನೇತೃತ್ವದ ಸೇನಾಪಡೆ ಮೇಲೆ ಇರಾನ್ ನಡೆಸಿದ  ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಕನಿಷ್ಠ 80 ಉಗ್ರರು ಸತ್ತಿದ್ದಾರೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ .

ರೆವಲ್ಯೂಷನರಿ ಗಾರ್ಡ್ಸ್‌ನ ಹಿರಿಯ ಅಧಿಕಾರಿಯ ಮಾತುಗಳನ್ನು ಇರಾನ್ ಟಿವಿ ಮಾಧ್ಯಮ ಉಲ್ಲೇಖಿಸಿದ್ದು, ಅಮೆರಿಕ ಪ್ರತೀಕಾರ ದಾಳಿ ನಡೆಸಿದರೆ 100 ಪ್ರದೇಶಗಳ ಮೇಲೆ ದಾಳಿ ನಡೆಸಲಿದ್ದೇವೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಹೆಲಿಕಾಪ್ಟರ್ ಮತ್ತು ಮಿಲಿಟರಿ ಸಾಧನಗಳು ಹಾನಿಗೀಡಾಗಿವೆ. ಆದರೆ ಈ ಮಾಹಿತಿ ಬಗ್ಗೆ ಯಾವುದೇ ಸಾಕ್ಷ್ಯಗಳನ್ನು ಟಿವಿಯಲ್ಲಿ ತೋರಿಸಿಲ್ಲ. 

ಇರಾಕ್‌ನಲ್ಲಿರುವ ಅಮೆರಿಕ ಸೇನಾಪಡೆಗಳ ಮೇಲೆ ಇರಾನ್ 15 ಕ್ಷಿಪಣಿ ದಾಳಿ ನಡೆಸಿದೆ ಎಂದು ಇರಾನ್ ಟಿವಿ ಹೇಳಿದೆ. ಆದಾಗ್ಯೂ, ಇರಾಕ್ ಸಮಯ ರಾತ್ರಿ 1.30ಕ್ಕೆ ಅಮೆರಿಕ ಸೇನಾಪಡೆಗೆ ಆತಿಥ್ಯ ವಹಿಸಿದ್ದ ಕನಿಷ್ಠ ಎರಡು ಇರಾಕ್ ಸಿಬ್ಬಂದಿಗಳನ್ನು ಗುರಿಯಾಗಿರಿಸಿತ್ತು ಎಂದು ಅಮೆರಿಕ ಸೇನಾಪಡೆ ಹೇಳುತ್ತಿದೆ. ಆದರೆ 22 ಕ್ಷಿಪಣಿ ದಾಳಿ ನಡೆಸಲಾಗಿತ್ತು ಎಂದು ಇರಾಕ್ ವಾದಿಸಿದೆ.

ಇದನ್ನೂ ಓದಿ:  ಯುದ್ಧಭೀತಿ | ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್‌ ಖಂಡಾಂತರ ಕ್ಷಿಪಣಿ ದಾಳಿ

ನಮಗೆ ಯುದ್ಧ ಬೇಡ. ಇರಾನಿನ ರೆವಲ್ಯೂಷನರಿ ಗಾರ್ಡ್ಸ್‌ನ ಕುದ್ಸ್‌ ಪಡೆಯ ಮುಖ್ಯಸ್ಥ ಮೇಜರ್‌ ಜನರಲ್‌ ಖಾಸಿ ಸುಲೇಮಾನಿಯನ್ನು ಹತ್ಯೆಗೈದುದಕ್ಕಾಗಿ ಇರಾನ್ ಪ್ರತ್ಯುತ್ತರ ನೀಡಿದೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಸುಲೇಮಾನಿಯನ್ನು ಕಳೆದುಕೊಂಡು ದುಃಖಿತರಾಗಿದ್ದವರು ಅಮೆರಿಕ ಮೇಲಿನ ದಾಳಿಯನ್ನು ಸಂಭ್ರಮಿಸುತ್ತಿರುವ ದೃಶ್ಯವನ್ನು ಇರಾನ್ ಟಿವಿ ಪ್ರಸಾರ  ಮಾಡಿದೆ. 

ದಾಳಿಯಲ್ಲಿ ಅಮೆರಿಕದ ಸೇನಾಪಡೆಗೆ ಹಾನಿಯಾಗಿಲ್ಲ ಎಂದು ಮೂಲವೊಂದು ಹೇಳಿದೆ. ಏತನ್ಮಧ್ಯೆ, ಈ ಬಗ್ಗೆ ಹೇಳಿಕೆ ನೀಡಲು ಅಮೆರಿಕ ಅಧಿಕಾರಿಗಳು ನಿರಾಕರಿಸಿದ್ದಾರೆ.

ಇದನ್ನೂ ಓದಿ: ಸುಲೇಮಾನಿ ಹತ್ಯೆಗೆ ಆದೇಶಿಸಿದ ಅಮೆರಿಕ ಪಡೆಗಳು ಭಯೋತ್ಪಾದಕರು: ಇರಾನ್‌ ಘೋಷಣೆ

ಅಮೆರಿಕ ಪಡೆಗಳು ಭಯೋತ್ಪಾದಕರು: ಇರಾನ್‌

ಅಮೆರಿಕದ ಎಲ್ಲಾ ಪಡೆಗಳನ್ನು ‘ಭಯೋತ್ಪಾದಕರು’ ಎಂದು ಘೋಷಿಸಿ ಮಸೂದೆಯೊಂದನ್ನು ಇರಾನ್‌ ಸಂಸತ್‌ ಮಂಗಳವಾರ ಅಂಗೀಕರಿಸಿದೆ. 

ಈ ಮಸೂದೆ ಅಡಿಯಲ್ಲಿ, ಅಮೆರಿಕದ ಎಲ್ಲಾ ಪಡೆಗಳು, ಪೆಂಟಗನ್‌ ಮತ್ತು ಅದರ ಅಂಗಸಂಸ್ಥೆಗಳು, ಕಮಾಂಡರ್‌ಗಳು ಹಾಗೂ ಸುಲೇಮಾನಿ ಹತ್ಯೆಗೆ ಆದೇಶಿಸಿದವರನ್ನು ಭಯೋತ್ಪಾದಕರು ಎಂದು ಹೆಸರಿಸಿದೆ.

‘ಸೇನೆ, ಗುಪ್ತಚರ, ಹಣಕಾಸು, ತಾಂತ್ರಿಕ ಸೇವೆ ಸೇರಿದಂತೆ ಈ ಪಡೆಗಳಿಗೆ ಯಾವುದೇ ಸಹಾಯ ಮಾಡುವವರನ್ನು ಭಯೋತ್ಪಾದಕ ಕಾಯ್ದೆ ಅಡಿಯಲ್ಲಿ ಪರಿಗಣಿಸಲಾಗುವುದು’ ಎಂದು ಸಂಸತ್‌ ತಿಳಿಸಿದೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಅನ್ನು ಭಯೋತ್ಫಾದಕ ಸಂಘಟನೆ ಎಂದು ಅಮೆರಿಕ ಘೋಷಿಸಿ ಕಪ್ಪು ಪಟ್ಟಿಗೆ ಸೇರಿಸಿದ ನಂತರ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇರಾನ್‌ನ ಉನ್ನತ ಮಟ್ಟದ ರಾಷ್ಟ್ರೀಯ ಭದ್ರತಾ ಮಂಡಳಿ ಹೇಳಿದೆ.‌

  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು