ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಕಾರಿನಲ್ಲಿ ಹಿಡಿಸಲಿಲ್ಲ ಈ 250 ಕೆಜಿ ತೂಕದ ಐಸಿಸ್ ಉಗ್ರ

ಐಸಿಸ್ ಉಗ್ರರಿಗೆ ಮತ್ತೊಂದು ಹಿನ್ನಡೆ
Last Updated 19 ಜನವರಿ 2020, 6:28 IST
ಅಕ್ಷರ ಗಾತ್ರ

ಮೊಸುಲ್ (ಇರಾಕ್): ಜೀವ ಇರುವವರೆಗೆಭದ್ರತಾ ಪಡೆಗಳ ವಿರುದ್ಧ ಹೋರಾಡುವಂತೆಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸುವಂತೆ ಐಸಿಸ್ (ಇಸ್ಲಾಮಿಕ್ ಸ್ಟೇಟ್)ಹೆಸರಿನಲ್ಲಿ ಸಾಲುಸಾಲು ಫತ್ವಾ ಹೊರಡಿಸುತ್ತಿದ್ದ ಉಗ್ರ ಮುಫ್ತಿ ಅಬು ಅಬ್ದುಲ್ ಬಾರಿ ಅಲಿಯಾಸ್ಜಬ್ಬಾ ದಿಜಿಹಾದಿಯನ್ನು ಇರಾಕ್‌ನ ವಿಶೇಷ ಕಾರ್ಯಪಡೆ ಸಿಬ್ಬಂದಿ ಬಂಧಿಸಿದ್ದಾರೆ.

ಐಸಿಸ್‌ನ ಮುಖ್ಯ ಧಾರ್ಮಿಕ ನಾಯಕನೆಂದು ಗುರುತಿಸಿಕೊಂಡಿದ್ದ ‘ಜಬ್ಬಾ’ನ ಬಂಧನ ಈಚಿನ ದಿನಗಳಲ್ಲಿ ಐಸಿಸ್‌ಗೆ ಆದ ಮತ್ತೊಂದು ಮುಖ್ಯ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

ಸುಮಾರು 250 ಕೆಜಿ ತೂಗುತ್ತಿದ್ದ ಜಬ್ಬಾ ಇರುವ ಜಾಗವನ್ನು ಪತ್ತೆಹಚ್ಚಿದ ವಿಶೇಷ ಕಾರ್ಯಪಡೆ ಸಿಬ್ಬಂದಿ ಅವನನ್ನು ಬಂಧಿಸಲು ಮುಂದಾದರು. ಆದರೆ ಅವನನ್ನು ಬಂಧಿಸಲೆಂದುತಂದಿದ್ದ ಕಾರಿನೊಳಗೆ ಜಬ್ಬಾ ಹಿಡಿಸುತ್ತಿರಲಿಲ್ಲ. ಕೊನೆಗೆ ಮಿನಿಟ್ರಕ್ ತರಿಸಿ, ಅದರಲ್ಲಿ ಜಬ್ಬಾನನ್ನು ಮಲಗಿಸಿಕೊಂಡು ಹೋದರು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ಸಿರಿಯಾದರಖ್ಖಾ ಮತ್ತು ಇರಾಕ್‌ನ ಮೊಸುಲ್ ನಗರಗಳ ಮೇಲಿನ ಹಿಡಿತ ಕಳೆದುಕೊಂಡ ನಂತರವಿವಿಧ ಗುಂಪುಗಳಾಗಿ ಹಂಚಿಹೋಗಿರುವ ಐಸಿಸ್ ಉಗ್ರರಿಗೆ ಅಬ್ದುಲ್ ಬಾರಿ ನಾಯಕನಾಗಿದ್ದ. ಐಸಿಸ್ ಆಡಳಿತ ಮತ್ತು ಅದು ಹೇರುತ್ತಿದ್ದ ನಿಯಮಗಳನ್ನು ವಿರೋಧಿಸುತ್ತಿದ್ದ ಧಾರ್ಮಿಕ ನಾಯಕರನ್ನು ಕೊಲ್ಲಲು ಫತ್ವಾ ಹೊರಡಿಸುತ್ತಿದ್ದ ಎಂದು ಇರಾಕ್ ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಅಬ್ದುಲ್ ಬಾರಿ ಬಂಧನದ ಬಗ್ಗೆ ಲಂಡನ್‌ನಲ್ಲಿ ನೆಲೆಸಿರುವ ಇಸ್ಲಾಮಿಕ್ ಮೂಲಭೂತವಾದ ವಿರೋಧಿ ಹೋರಾಟಗಾರ ಮಾಜಿದ್ ನವಾಜ್ ಫೇಸ್‌ಬುಕ್‌ನಲ್ಲಿ ಚಿತ್ರ ಸಹಿತ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.

‘ಅಬ್ದುಲ್ ಬಾರಿ ಬಂಧನದಿಂದ ಹರಿದುಹಂಚಿ ಹೋಗಿರುವ ಐಸಿಸ್ ಸಂಘಟನೆಗೆ ಮತ್ತಷ್ಟು ಹಿನ್ನಡೆ ಉಂಟಾಗಿದೆ. ಜನರನ್ನು ಕೊಲ್ಲಲು ಮತ್ತು ಆತ್ಮಾಹುತಿಗೆ ಮುಂದಾಗಲುಇವನು ಸಾಕಷ್ಟು ಫತ್ವಾಗಳನ್ನು ಹೊರಡಿಸಿದ್ದ. ಮಾನವೀಯತೆಯ ವಿರುದ್ಧಐಸಿಸ್ ನಡೆಸುತ್ತಿದ್ದ ಎಲ್ಲ ಬಗೆಯ ದೌರ್ಜನ್ಯಗಳನ್ನೂ ಇಸ್ಲಾಂ ಹೆಸರಿನಲ್ಲಿ ಸಮರ್ಥಿಸಿಕೊಳ್ಳುತ್ತಿದ್ದ’ ಎಂದು ಮಾಜಿದ್ ಹೇಳಿದ್ದಾರೆ.

ಕುರ್ದಿಷ್ ಪಡೆಗಳೊಂದಿಗೆ ಐಸಿಸ್ ವಿರುದ್ಧ ಹೋರಾಡಿದ್ದ ಬ್ರಿಟನ್‌ನಮಾಸೆರ್ ಗಿಫೋರ್ಡ್‌ ಸಹ ಬಾರಿ ಬಂಧನವನ್ನು ಶ್ಲಾಘಿಸಿದ್ದಾರೆ. ಬಾರಿಯನ್ನು ಅವರು ‘ಜಬಾ ದಿ ಜಿಹಾದಿ’ ಎಂದು ಕರೆದಿದ್‌ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT