ರೋಮ್: ಕೊರೊನಾ ವೈರಸ್‌ಗೆ ತತ್ತರಿಸಿರುವ ಇಟಲಿಯಲ್ಲಿ ಬಲಿಯಾದವರ ಸಂಖ್ಯೆ 5,500ರ ಗಡಿ ಸಮೀಪಿಸಿದ್ದು, ಮೃತರ ಸಂಖ್ಯೆಯು ಶನಿವಾರಕ್ಕೆ ಹೋಲಿಸಿದರೆ ಶೇ 13.5ರಷ್ಟು ಏರಿಕೆಯಾಗಿದೆ.

ಇಟಲಿಯಲ್ಲಿ ಭಾನುವಾರ ಒಂದೇ ದಿನ 651 ಮಂದಿ ಮೃತಪಟ್ಟಿದ್ದು, ಕೊರೊನಾ ವೈರಸ್‌ಗೆ ಬಲಿಯಾದವರ ಸಂಖ್ಯೆಯು 5,476 ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

53,578 ಸಾವಿರದಷ್ಟು ಮಂದಿಯಿದ್ದ ಸೋಂಕಿತರ ಸಂಖ್ಯೆ ಶೇ 10.4ಕ್ಕೆ ಏರಿಕೆಯಾಗುವ ಮೂಲಕ ಇದೀಗ 59,138ಕ್ಕೆ ತಲುಪಿದೆ. ಇದುವರೆಗೂ 7,024 ಮಂದಿಯು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, 3,009 ಮಂದಿಯನ್ನು ತೀವ್ರ ನಿಗಾದಲ್ಲಿಡಲಾಗಿದೆ.

ಕಳೆದ ಶುಕ್ರವಾರ ಒಂದೇ ದಿನ ಇಟಲಿಯಲ್ಲಿ 627 ಮಂದಿ ಮೃತಪಟ್ಟಿದ್ದರೆ, ಬುಧವಾರವೂ ಒಂದೇ ದಿನ 475 ಮಂದಿ ಬಲಿಯಾಗಿದ್ದರು. ಈ ಮೂಲಕ ಕೊರೊನಾ ವೈರಸ್ ಭೀಕರತೆ ಮೆರೆದಿತ್ತು.

ಚೀನಾದಲ್ಲಿ ಈವರೆಗೆ 3,249 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿರುವ 187 ದೇಶಗಳ ಪೈಕಿ ಇದುವರೆಗೂ ವಿಶ್ವದಾದ್ಯಂತ 294,110 ಜನರಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದ್ದು, 12,944 ಜನರು ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.