ಭಾನುವಾರ, ಜನವರಿ 19, 2020
20 °C

ಇಂಡೊನೇಷ್ಯಾ: ಕಟ್ಟಡ ಕುಸಿತ, ಇಬ್ಬರಿಗೆ ಗಾಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಜಕಾರ್ತ, ಇಂಡೊನೇಷ್ಯಾ: ಐದು ಅಂತಸ್ತುಗಳ ಬಹುಮಹಡಿ ಕಟ್ಟಡ ಕುಸಿದ ಪರಿಣಾಮ ಕನಿಷ್ಠ ಇಬ್ಬರು ಗಾಯಗೊಂಡಿರುವ ಘಟನೆ ಪಶ್ಚಿಮ ಜಕಾರ್ತದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ‌

ಕಟ್ಟಡವು ವಸತಿ ಪ್ರದೇಶಕ್ಕೆ ಹೊಂದಿಕೊಂಡಿತ್ತು. ಆದರೆ, ಇದು ಮುಖ್ಯರಸ್ತೆ ಮೇಲೆ ಕಟ್ಟಡ ಕುಸಿದಿದೆ. ಇದರಿಂದ ಹೆಚ್ಚಿನ ಸಾವು– ನೋವು ತಪ್ಪಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದ ಅವಶೇಷಗಳಲ್ಲಿ ಇನ್ನು ಹಲವು ಮಂದಿ ಸಿಲುಕಿಕೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದರೆ, ರಾಷ್ಟ್ರೀಯ ರಕ್ಷಣಾ ಪಡೆಯು ಮೂವರು ಎಂದು ಹೇಳಿದೆ. ಇದಕ್ಕೆ ವ್ಯತಿರಿಕ್ತವಾಗಿ ಸ್ಥಳೀಯ ಮಾಧ್ಯಮಗಳು 8 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಮಾಡಿವೆ. 

ಕಳೆದ ವಾರವಷ್ಟೇ ಬಹುಮಹಡಿ ಕಟ್ಟಡ ಕುಸಿದು 60 ಮಂದಿ ಮೃತಪಟ್ಟಿದ್ದರು.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು