ಶನಿವಾರ, ಏಪ್ರಿಲ್ 17, 2021
24 °C
ತೀರ್ಪಿನ ಬಗ್ಗೆ ಮರುಪರಿಶೀಲಿಸಲು ಪಾಕಿಸ್ತಾನಕ್ಕೆ ಸೂಚನೆ

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತರರಾಷ್ಟ್ರೀಯ ನ್ಯಾಯಾಲಯ ತಡೆ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಹೇಗ್: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ ಜಾಧವ್‌ (49) ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯವು ನೀಡಿದ್ದ ಮರಣದಂಡನೆ ತೀರ್ಪಿನ ವಿಚಾರದಲ್ಲಿ→ ಭಾರತಕ್ಕೆ ಮಹತ್ವದ ಗೆಲುವು ಲಭಿಸಿದೆ. ಪಾಕಿಸ್ತಾನದ ತೀರ್ಪನ್ನು ಮರುಪರಿಶೀಲನೆ ನಡೆಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವು ಬುಧವಾರ ಸೂಚನೆ ನೀಡಿದೆ.

2017ರಲ್ಲಿ ಜಾಧವ್‌ ಅವರನ್ನು ಪಾಕಿಸ್ತಾನ ಬಂಧಿಸಿತ್ತು. ಇವರ ವಿಚಾರಣೆ ನಡೆಸಿದ್ದ ಪಾಕಿಸ್ತಾನದ ಸೇನಾ ನ್ಯಾಯಾಲಯವು, ‘ಜಾಧವ್‌ ಬಲೂಚಿಸ್ತಾನವನ್ನು ಅಸ್ಥಿರಗೊಳಿಸಲು ದೇಶದೊಳಗೆ ನುಸುಳಿ ಬಂದಿರುವ ಭಾರತೀಯ ಗೂಢಚಾರ’ ಎಂದು ಆರೋಪಿಸಿ, ಅವರಿಗೆ ಮರಣದಂಡನೆ ವಿಧಿಸಿತ್ತು.

ಈ ತೀರ್ಪಿನ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗಿದ್ದ ಭಾರತವು, ‘ಜಾಧವ್‌ ಅವರ ವಿಚಾರಣೆಯನ್ನು ನ್ಯಾಯಬದ್ಧವಾಗಿ ನಡೆಸಿಲ್ಲ. ಪಾಕಿಸ್ತಾನವು ಅವರಿಗೆ ರಾಜತಾಂತ್ರಿಕ ನೆರವನ್ನು ನಿರಾಕರಿಸಿತ್ತು. ಅದು ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗುತ್ತದೆ’ ಎಂದು ವಾದಿಸಿತ್ತು.

ನ್ಯಾಯಾಧೀಶ ಅಬ್ದುಲ್‌ಕ್ವಾವಿ ಅಹ್ಮದ್‌ ಯೂಸುಫ್‌ ನೇತೃತ್ವದ 15 ಮಂದಿ ಸದಸ್ಯರ ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಪೀಠವು ಪ್ರಕರಣದ ವಿಚಾರಣೆಯನ್ನು ಕಳೆದ ಫೆಬ್ರುವರಿ ತಿಂಗಳಲ್ಲಿ ಪೂರ್ಣಗೊಳಿಸಿತ್ತು. ಇದಾಗಿ ಐದು ತಿಂಗಳ ಬಳಿಕ ತೀರ್ಪು ಹೊರಬಂದಿದೆ.

15:1 ತೀರ್ಪು

ಅಂತರರಾಷ್ಟ್ರೀಯ ನ್ಯಾಯಾಲಯದ 16 ನ್ಯಾಯಾಧೀಶರ ಪೈಕಿ 15 ಮಂದಿ ಭಾರತದ ಪರ ತೀರ್ಪು ನೀಡಿದ್ದಾರೆ. ಪಾಕಿಸ್ತಾನದ ನ್ಯಾಯಾಧೀಶರೊಬ್ಬರು ಮಾತ್ರ ಭಿನ್ನಮತ ದಾಖಲಿಸಿದ್ದಾರೆ. ಚೀನಾದ ನ್ಯಾಯಾಧೀಶರು ಕೂಡ ಭಾರತದ ಪರವಾಗಿಯೇ ನಿಂತಿದ್ದಾರೆ. ಇದು ಪಾಕಿಸ್ತಾನದ ಮೇಲೆ ಹೆಚ್ಚಿನ ಒತ್ತಡ ಹೇರುವ ಸಾಧ್ಯತೆ ಇದೆ. 

**

ಇನ್ನಷ್ಟು...

ಕುಲಭೂಷಣ್‌ ಜಾಧವ್‌ ಪ್ರಕರಣ: ಐಸಿಜೆಯಲ್ಲಿ ಪಾಕ್‌ಗೆ ಮುಖಭಂಗ

‘ಜಾಧವ್‌ಗೆ ಶಿಕ್ಷೆ ಕಾನೂನುಬಾಹಿರ’

ಕುಲಭೂಷಣ್‌ ಜಾಧವ್‌ ಭೇಟಿಯಾದ ತಾಯಿ, ಪತ್ನಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು