ಇಸ್ಲಾಮಾಬಾದ್: ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ನೀಡಿರುವ ಮರಣದಂಡನೆ ಆದೇಶ ಪ್ರಶ್ನಿಸಿ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಸಲ್ಲಿಸಿರುವ ಅರ್ಜಿಯನ್ನು ಲಾಹೋರ್ ಹೈಕೋರ್ಟ್ ಹಿಂದಕ್ಕೆ ಕಳುಹಿಸಿದೆ.

ಚಳಿಗಾಲದ ರಜೆ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಗೆ ಪೂರ್ಣ ಸದಸ್ಯರಿರುವ ನ್ಯಾಯಪೀಠ ಲಭ್ಯವಿಲ್ಲದಕಾರಣ ನೀಡಿ, ಲಾಹೋರ್ ಹೈಕೋರ್ಟ್‌ನ ರಿಜಿಸ್ಟ್ರಾರ್ ಕಚೇರಿ ಅರ್ಜಿಯನ್ನು ವಾಪಸ್ ಕಳುಹಿಸಿದೆ. ವಿಶೇಷ ನ್ಯಾಯಾಲಯದ ಮರಣದಂಡನೆ ಶಿಕ್ಷೆ ಆದೇಶ ಪ್ರಶ್ನಿಸಿ, ಮುಷರಫ್ ಪರವಕೀಲರಾದ ಅಜರ್ ಸಿದ್ದಿಕಿ ಶುಕ್ರವಾರ 86 ಪುಟಗಳ ಅರ್ಜಿ ಸಲ್ಲಿಸಿದ್ದರು.

ಶುಕ್ರವಾರವೇ ಈ ಅರ್ಜಿಯನ್ನು ಕಚೇರಿ ವಾಪಸ್ ಕಳುಹಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಅರ್ಜಿಯನ್ನು ಜನವರಿ ಮೊದಲ ವಾರದಲ್ಲಿ ಮತ್ತೆ ಸಲ್ಲಿಸುವಂತೆ ರಿಜಿಸ್ಟ್ರಾರ್ ಹೇಳಿದ್ದಾರೆ’ ಎಂದು ಸಿದ್ದಿಕಿ ತಿಳಿಸಿದರು. ತನ್ನ ವಿರುದ್ಧದ ಪ್ರಕರಣದ ತನಿಖೆಗೆ ವಿಶೇಷ ವಿಚಾರಣಾ ನ್ಯಾಯಾಲಯ ಸ್ಥಾಪನೆ ಪ್ರಶ್ನಿಸಿ ಮುಷರಫ್ ಹಿಂದೆಯೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.