ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್‌ಸ್ಟರ್‌ಡ್ಯಾಂ: ಮಹಾತ್ಮ ಗಾಂಧಿ ಪ್ರತಿಮೆ ವಿರೂಪ

Last Updated 18 ಜೂನ್ 2020, 8:01 IST
ಅಕ್ಷರ ಗಾತ್ರ

ಆಮ್‌ಸ್ಟರ್‌ಡ್ಯಾಂ: ನಗರದ ಚರ್ಚಿಲ್ಲಾನ್‌ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದಾರೆ.

ಪ್ರತಿಮೆಗೆ ಕೆಂಪು ಬಣ್ಣವನ್ನು ಬಳಿದು, ಪ್ರತಿಮೆ ಇರುವ ಸ್ತಂಭದ ಮೇಲೆ ಜನಾಂಗೀಯ ನಿಂದನೆ ಕುರಿತಂತೆ ಬರೆಯಲಾಗಿದೆ ಹಾಗೂ ಪೊಲೀಸರ ವಿರುದ್ಧ ಕೆಟ್ಟಪದಗಳಿಂದ ಬರೆಯಲಾಗಿದೆ ಎಂದು ಡಚ್‌ ದೈನಿಕ ಮೆಟ್ರೊ ವರದಿ ಮಾಡಿದೆ.

ನಗರ ಪಾಲಿಕೆಯ ಹಿರಿಯ ಅಧಿಕಾರಿ ರುಟ್ಗರ್ ಗ್ರೂಟ್‌ ವಾಸಿಂಕ್‌ ಅವರು ಘಟನೆಯನ್ನು ಖಂಡಿಸಿದ್ದು, ‘ಪ್ರತಿಮೆಗೆ ಬಣ್ಣ ಬಳಿಯುವುದು,ಯಾವುದೇ ಪ್ರಕಾರದ ವಿಧ್ವಂಸಕ ಕೃತ್ಯಗಳನ್ನು ಸಹಿಸುವುದಿಲ್ಲ. ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಕೂಡಲೇ ಸ್ವಚ್ಛಗೊಳಿಸಲಾಗುವುದು’ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಇತ್ತೀಚೆಗೆ ಆಫ್ರೊ–ಅಮೆರಿಕನ್‌ ಜಾರ್ಜ್‌ ಫ್ಲಾಯ್ಡ್‌ ಪೊಲೀಸ್‌ ಕಸ್ಟಡಿಯಲ್ಲಿದ್ದಾಗ ಸಾವನ್ನಪ್ಪಿದ ನಂತರ ಎಲ್ಲೆಡೆ ಆಕ್ರೋಶ ಭುಗಿಲೆದ್ದಿತ್ತು. ಆ ಘಟನೆಗೆ ಇಲ್ಲಿಯೂ ಪ್ರತಿಭಟನೆ ವ್ಯಕ್ತವಾಗಿದ್ದು, ಅದರ ಭಾಗವಾಗಿಯೇ ಈ ದುಷ್ಕರ್ಮಿಗಳು ಈ ವಿಕೃತಿ ಮೆರೆದಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT