ಭಾನುವಾರ, ಏಪ್ರಿಲ್ 5, 2020
19 °C

ಕೊರೊನಾ ವೈರಸ್ ಆಯ್ತು ಇದೀಗ ಹಂಟಾವೈರಸ್ ಭೀತಿ, ಚೀನಾದಲ್ಲಿ ವ್ಯಕ್ತಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೀಜಿಂಗ್: ಚೀನಾದ ಯುನ್ನಾನ್ ಪ್ರಾಂತ್ಯದಲ್ಲಿ ವ್ಯಕ್ತಿಯೊಬ್ಬರಿಗೆ ನಡೆಸಿದ ಪರೀಕ್ಷೆಯಲ್ಲಿ ಹಂಟಾ ವೈರಸ್ ಸೋಂಕು ದೃಢಪಟ್ಟಿತ್ತು. ಸೇವಾದಾತ ಸಂಸ್ಥೆ ಒದಗಿಸಿದ್ದ ಬಸ್ಸಿನಲ್ಲಿ ಕೆಲಸಕ್ಕಾಗಿ ಶಾಂಡೊಂಗ್ ಪ್ರಾಂತ್ಯಕ್ಕೆ ಬಂದು ಹಿಂದಿರುಗುವಾಗ ಅವರು ಮತಪಟ್ಟಿದ್ದಾರೆ ಎಂದು ಚೀನಾದ 'ಗ್ಲೋಬಲ್ ಟೈಮ್ಸ್' ವರದಿ ಮಾಡಿದೆ. ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ದೇಶದಲ್ಲಿ ಇತರ 32 ಜನರನ್ನು ಪರೀಕ್ಷಿಸಿದಾಗ ಅವರ ದೇಹದಲ್ಲೂ ಹಂಟಾ ವೈರಸ್‌ ಇರುವುದು ತಿಳಿದುಬಂತು.

ಹಂಟಾ ವೈರಸ್‌ನಿಂದ ವ್ಯಕ್ತಿಯೊಬ್ಬ ಮೃತಪಟ್ಟ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಟಾ ವೈರಸ್‌ ಟ್ರೆಂಡ್ ಆಗುತ್ತಿದೆ. ಕೋವಿಡ್-19 ಮಾದರಿಯಲ್ಲಿ ಇದು ಹೊಸ ಸಾಂಕ್ರಾಮಿಕ ರೋಗವಾಗಿ ಹರಡಬಹುದು ಎಂದು ಜನರು ಭಯಭೀತರಾಗಿದ್ದಾರೆ. ಹಂಟಾ ವೈರಸ್ ಬಗ್ಗೆ ರಿಯಾಲಿಟಿ ಚೆಕ್ ಇಲ್ಲಿದೆ.

‘ಮಾನವರು ಸಾಮಾನ್ಯವಾಗಿ ವೈರಸ್ ಅನ್ನು ಹೊಂದಿರುವ ಇಲಿಯನ್ನು ಹೋಲುವ ಸಸ್ತನಿಗಳ ಸಂಪರ್ಕಕ್ಕೆ ಬರುತ್ತಾರೆ. ಇದರಿಂದ ವೈರಸ್ ತಗುಲುತ್ತದೆ ಮತ್ತು ಮನೆ ಮತ್ತು ಸುತ್ತಮುತ್ತಲಿನ ಸಸ್ತನಿಗಳ ಮುಟ್ಟುವಿಕೆಯೊಂದಿಗೆ ಹಂಟಾ ವೈರಸ್ ವ್ಯಾಪಿಸುತ್ತದೆ. ಒಮ್ಮೆ ವೈರಸ್‌ ತಗುಲಿದರೆ ಆರೋಗ್ಯವಂತ ವ್ಯಕ್ತಿಗಳು ಕೂಡ ಎಚ್‌ಪಿಎಸ್ ಸೋಂಕಿಗೆ ಒಳಗಾಗುತ್ತಾರೆ’ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಎಚ್‌ಪಿಎಸ್ ವ್ಯಕ್ತಿಯಿಂದ ವ್ಯಕ್ತಿಗೆ ರವಾನೆಯಾಗದಿದ್ದರೂ ಇಲ್ಲಿಯಂಥ ಸಸ್ತನಿಗಳ ಹಿಕ್ಕೆಗಳು, ಮೂತ್ರ ಅಥವಾ ಗೂಡುಕಟ್ಟುವ ವಸ್ತುಗಳನ್ನು ಮುಟ್ಟಿದ ನಂತರ ಯಾರಾದರೂ ಕಣ್ಣು, ಮೂಗು ಅಥವಾ ಬಾಯಿಯನ್ನು ಮುಟ್ಟಿದರೆ ವೈರಸ್ ತಗುಲುವಿಕೆಗೆ ಕಾರಣವಾಗುತ್ತದೆ ಎಂದು ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಷನ್ ಫ್ಯಾಕ್ಟ್ ಶೀಟ್‌ ತಿಳಿಸುತ್ತದೆ.

ವೈರಸ್‌ ತಗುಲಿದ ಆರಂಭಿಕ ಲಕ್ಷಣಗಳಲ್ಲಿ ಜ್ವರ, ತಲೆನೋವು, ಸ್ನಾಯು ನೋವು, ಹೊಟ್ಟೆ ನೋವು, ತಲೆತಿರುಗುವಿಕೆ, ಶೀತ ಮತ್ತು ಹೊಟ್ಟೆಯ ತೊಂದರೆಗಳಾದ ವಾಕರಿಕೆ, ವಾಂತಿ, ಅತಿಸಾರ ಉಂಟಾಗುತ್ತದೆ. ಎಲ್ಲಾ ಎಚ್‌ಪಿಎಸ್ ರೋಗಿಗಳಲ್ಲಿ ಅರ್ಧದಷ್ಟು ಜನರು ಈ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ.

ತಡವಾಗಿ ಕಾಣಿಸಿಕೊಳ್ಳುವ ಲಕ್ಷಣಗಳು ಶ್ವಾಸಕೋಶದಲ್ಲಿ ದ್ರವ ತುಂಬಿಕೊಳ್ಳುವುದು ಮತ್ತು ಉಸಿರಾಟದ ತೊಂದರೆಗಳಿಗೆ ದಾರಿ ಮಾಡಿಕೊಡುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು