ಮಂಗಳವಾರ, ಸೆಪ್ಟೆಂಬರ್ 21, 2021
26 °C

ವಿಚ್ಛೇದಿತ ಪತ್ನಿಗೆ ₹ 285 ಕೋಟಿ ಪರಿಹಾರ ನೀಡಿದ ಕ್ಲಾರ್ಕ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮೆಲ್ಬರ್ನ್: ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮೈಕೆಲ್ ಕ್ಲಾರ್ಕ್‌ ತಮ್ಮ ವಿಚ್ಛೇದಿತ ಪತ್ನಿಗೆ ₹ 285 ಕೋಟಿ ಪರಿಹಾರ ನೀಡಿದ್ದಾರೆ.

ಏಳು ವರ್ಷಗಳ ಹಿಂದೆ ಕ್ಲಾರ್ಕ್ ಅವರು ಕೈಲಿ ಬೋಲ್ಡಿ ಅವರನ್ನು ವಿವಾಹವಾಗಿದ್ದರು. ಅವರಿಗೆ ನಾಲ್ಕು ವರ್ಷದ ಮಗಳು ಕೆಲ್ಸಿ ಲೀ ಕೂಡ ಇದ್ದಾಳೆ.

‘ಕೆಲ ಕಾಲ ದೂರವುಳಿದ ನಂತರ ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ. ಇದು ತುಂಬಾ ಕಠಿಣ ನಿರ್ಧಾರವಾಗಿದೆ. ಪರಸ್ಪರ ಒಪ್ಪಂದದೊಂದಿಗೆ ದೂರ ಸರಿಯುತ್ತಿದ್ದೇವೆ’ ಎಂದು ಕ್ಲಾರ್ಕ್ ಮತ್ತು ಕೈಲಿ ಅವರು ‘ದ ಆಸ್ಟ್ರೇಲಿಯನ್‌’ ಪತ್ರಿಕೆಗೆ ಹೇಳಿಕೆ ನೀಡಿದ್ದಾರೆ.

‘ನಾವಿಬ್ಬರೂ ಪರಸ್ಪರರ ಭಾವನೆಗಳನ್ನು ಗೌರವಿಸಿದ್ದೇವೆ. ನಮ್ಮೊಳಗೆ ಒಪ್ಪಂದ ಮಾಡಿಕೊಂಡು ದೂರವಾಗಿದ್ದೇವೆ. ಆದರೆ ಮಗಳ ಪಾಲನೆ ಪೋಷಣೆಯಲ್ಲಿ ಇಬ್ಬರೂ ಸಹಭಾಗಿಗಳಾಗಲಿದ್ದೇವೆ’ ಎಂದು 38 ವರ್ಷದ ಕ್ಲಾರ್ಕ್‌ ಹೇಳಿದ್ದಾರೆ.

ಇವರಿಬ್ಬರೂ ಕಳೆದ ಐದು ತಿಂಗಳಿಂದ ಬೇರೆ ಬೇರೆ ವಾಸಿಸುತ್ತಿದ್ದರು ಎಂದು ವರದಿಗಳು ಹೇಳಿವೆ. 2004ರಿಂದ 2015ರ ಅವಧಿಯಲ್ಲಿ ಕ್ಲಾರ್ಕ್ 115 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 8643 ರನ್‌ ಗಳಿಸಿದ್ದಾರೆ. ಅದರಲ್ಲಿ 28 ಶತಕಗಳಿವೆ. ಅವರ ನಾಯಕತ್ವದ ಆಸ್ಟ್ರೇಲಿಯಾ ತಂಡವು 2015ರಲ್ಲಿ ವಿಶ್ವಕಪ್ ಗೆದ್ದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು