ಶನಿವಾರ, ಮಾರ್ಚ್ 6, 2021
31 °C

ಪ್ರಧಾನಿ ಮೋದಿ ಶ್ರೀಲಂಕಾ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲೊಂಬೊ: ಮಾಲ್ಡೀವ್ಸ್‌ ಪ್ರವಾಸದ ಬಳಿಕ ಪ್ರಧಾನಿ ಮೋದಿ ಶ್ರೀಲಂಕಾಕ್ಕೆ ಭೇಟಿ ನೀಡಿದ್ದು, ಆತ್ಮಾಹುತಿ ದಾಳಿಯ ನಂತರ ಶ್ರೀಲಂಕಾಗೆ ಭೇಟಿ ನೀಡುತ್ತಿರುವ ಮೊದಲ ವಿದೇಶಿ ನಾಯಕನೆಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ. ಮೋದಿಯವರನ್ನು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಅವರು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ, ವಿಪಕ್ಷ ನಾಯಕ ಮಹೀಂದ್ರಾ ರಾಜಪಕ್ಸೆ ಅವರನ್ನು ಮೋದಿ ಭೇಟಿಯಾದರು. ಈಸ್ಟರ್ ಹಬ್ಬದ ದಿನ ದಾಳಿಗೊಳಗಾಗಿದ್ದ ಸಂತ ಆಂಥೋನಿ ಚರ್ಚ್‌ಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು.

ಮಾಲ್ಡೀವ್ಸ್‌ನಲ್ಲಿ ಅತ್ಯುತ್ತಮ ವಿದೇಶಿ ಗೌರವಕ್ಕೆ ಭಾಜನರಾದ ಪ್ರಧಾನಿ ಮೋದಿ ಅಲ್ಲಿನ ಸಂಸತ್ತಿನಲ್ಲಿ ಮಾತನಾಡಿದ್ದರು.  ದ್ವಿಪಕ್ಷೀಯ ಸಂಬಂಧಗಳ ಸುಧಾರಣೆ ,ಉಗ್ರವಾದದ ನಿರ್ಮೂಲನೆ, ಮತ್ತು ಜಾಗತಿಕ ತಾಪಮಾನಗಳ ಹೆಚ್ಚಳ ಕುರಿತು ಈ ಪ್ರವಾಸದಲ್ಲಿ ಚರ್ಚಿಸಲಾಯಿತು.

ಇದನ್ನು ಓದಿ: ಶ್ರೀಲಂಕಾ–ಮಾಲ್ಡೀವ್ಸ್‌ಗೆ ಮೋದಿ ಪ್ರವಾಸ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು