ಬುಧವಾರ, ಫೆಬ್ರವರಿ 19, 2020
31 °C

ಕೊರೊನಾ ವೈರಸ್ : ಚೀನಾಗೆ 1 ಲಕ್ಷ ಮುಖಗವಸು ನೀಡಿದ ನೇಪಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಠ್ಮಂಡು: ನೇಪಾಳ ಸರ್ಕಾರ 1,00,000 ಮುಖಗವಸು(ಮಾಸ್ಕ್‌)ನ್ನು ಮಾರಣಾಂತಿಕ ಕೊರೊನ ವೈರಸ್‌ನಿಂದ ಬಳಲುತ್ತಿರುವ ಚೀನಾಗೆ ಉಡುಗೊರೆಯಾಗಿ ನೀಡಿದೆ. ಈ ವೈರಸ್ 630ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ.

ವ್ಯಾಪಕವಾಗಿ ಕೊರೊನಾ ವೈರಸ್ ಹರಡುತ್ತಿರುವುದರಿಂದ ಚೀನಾದಲ್ಲಿ ಮಾಸ್ಕ್‌ನ ಕೊರತೆಯಾಗಿತ್ತು, ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನೇಪಾಳದ ವಿದೇಶಾಂಗ ಸಚಿವರು ಚೀನಾದ ರಾಯಭಾರಿಗೆ ಹಸ್ತಾಂತರಿಸಿದ್ದಾರೆ.

ಗುರುವಾರ ನಡೆದ ಉನ್ನತ ಅಧಿಕಾರಿಗಳ ಸಭೆಯು ಬಳಿಕ ನೇಪಾಳ ಸರ್ಕಾರವು 1,00,000 ಮುಖಗವಸು ನೀಡಲು ನಿರ್ಧರಿಸಿತ್ತು. ಚೀನಾ ರಾಯಭಾರಿ ನೇಪಾಳ ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಮುದಾಯದ ಸಹಕಾರಕ್ಕೆ ಧನ್ಯವಾದ ಹೇಳಿದ್ದಾರೆ.

ಕೊರೊನಾಗೆ ಒಟ್ಟು 636 ಮಂದಿ ಜೀವವನ್ನು ಕಳೆದುಕೊಂಡಿದ್ದಾರೆ. ರೋಗವು ವ್ಯಾಪಕವಾಗಿ ಹರಡುತ್ತಿದ್ದು 3,143 ಮಂದಿ ಕೊರೊನಾ ಬಾಧಿತರಾಗಿದ್ದಾರೆ ಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು