ಗುರುವಾರ , ಜೂಲೈ 9, 2020
29 °C

ನ್ಯೂಯಾರ್ಕ್‌: ಜೂನ್‌ 8 ರಿಂದ ಆರ್ಥಿಕತೆ ಪುನರಾರಂಭ

ಪಿಟಿಐ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್: ಕೋವಿಡ್‌–19ನಿಂದ ತತ್ತರಿಸಿರುವ ನ್ಯೂಯಾರ್ಕ್‌ ನಗರದಲ್ಲಿ ಜೂನ್‌ 8ರಿಂದ ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು ಎಂದು ಗವರ್ನರ್‌ ಆ್ಯಂಡ್ರೂ ಕ್ಯುಮೊ ತಿಳಿಸಿದ್ದಾರೆ. 

‘ಆರ್ಥಿಕ ಪುನಃಶ್ಚೇತನದಿಂದ ಮೊದಲ ಹಂತದಲ್ಲಿ ಸುಮಾರು 40 ಲಕ್ಷ ಮಂದಿ ಮತ್ತೆ ಉದ್ಯೋಗಕ್ಕೆ ತೆರಳಲಿದ್ದಾರೆ’ ಎಂದು ತಿಳಿಸಿದ್ದಾರೆ. 

ರಾಜ್ಯದಾದ್ಯಂತ ಪ್ರಾದೇಶಿಕ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭಗೊಂಡರೂ, ಮೊದಲ ಹಂತದ ಪುನರಾರಂಭಕ್ಕೆ ಅಗತ್ಯವಾದ ಏಳು ಆರೋಗ್ಯ ಸಂಬಂಧಿತ ಮಾನದಂಡಗಳ ತಯಾರಿ ನಡೆಯದ ಕಾರಣ ನ್ಯೂಯಾರ್ಕ್ ನಗರದಲ್ಲಿ ಲಾಕ್‌ಡೌನ್‌ ಮುಂದುವರಿಯಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. 

ಮೊದಲ ಹಂತದಲ್ಲಿ ಉತ್ಪಾದನೆ ಮತ್ತು ಸಗಟು ಪೂರೈಕೆ, ರಿಟೇಲ್‌ ವ್ಯಾಪಾರ ವಹಿವಾಟು ಕೃಷಿ, ಅರಣ್ಯ ಮತ್ತು ಮೀನುಗಾರಿಕೆಗೆ ಪುನರಾರಂಭಕ್ಕೆ ಅವಕಾಶ ನೀಡಲಾಗುವುದು ಎಂದರು. 

ಆರ್ಥಿಕ ಚಟುವಟಿಕೆಗಳು ಪುನರಾರಂಭವಾಗಿದೆ ಎಂದಾಕ್ಷಣ ಸಹಜ ಪರಿಸ್ಥಿತಿಗೆ ಹಿಂದಿರುಗಿದ್ದೇವೆ ಎಂದಲ್ಲ. ಇದೊಂದು ಹೊಸ ಆಯಾಮ. ಜನರು ಸುರಕ್ಷಿತವಾಗಿರುವುದು ಅಗತ್ಯ ಎಂದಿದ್ದಾರೆ.

ನಗರದಲ್ಲಿ ಈವರೆಗೆ 1.99 ಲಕ್ಷ ಸೋಂಕಿತರಿದ್ದು, 20 ಸಾವಿರ ಮಂದಿ ಮೃತಪಟ್ಟಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು