ಶುಕ್ರವಾರ, ಜನವರಿ 21, 2022
30 °C

ಬಾಲಾಕೋಟ್‌ಗೆ ಭಾರತೀಯ ಪತ್ರಕರ್ತರನ್ನು ಕರೆದೊಯ್ಯಲು ಸಿದ್ಧ: ಪಾಕ್‌

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಭಾರತೀಯ ಸೇನೆ ಬಾಲಾಕೋಟ್‌ನಲ್ಲಿ ನಡೆಸಿದ ವಾಯುದಾಳಿ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಕರೆದೊಯ್ಯಲು ಸಿದ್ಧ ಎಂದು ಪಾಕಿಸ್ತಾನ ಹೇಳಿದೆ. 

ಕಳೆದ ಫೆಬ್ರವರಿಯಲ್ಲಿ ಭಾರತೀಯ ಸೇನೆ ಬಾಲಕೋಟ್‌ನಲ್ಲಿ ನಡೆಸಿದ ವಾಯು ದಾಳಿಯಲ್ಲಿ ಉಗ್ರರು ಸತ್ತಿಲ್ಲ ಹಾಗೂ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ಪಾಕಿಸ್ತಾನ ಪ್ರತಿಪಾದಿಸುತ್ತಿರುವ ಬೆನ್ನಲ್ಲೇ ದಾಳಿಯ ಪ್ರದೇಶಕ್ಕೆ ಭಾರತೀಯ ಪತ್ರಕರ್ತರನ್ನು ಕರೆದುಕೊಂಡು ಹೋಗಲು ಸಿದ್ಧ ಎಂದು ಹೇಳಿದೆ. 

ರಾವಲ್ಪಿಂಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿರುವ ಪಾಕಿಸ್ತಾನ ಸೇನೆಯ ವಕ್ತಾರರಾದ ಮೇಜರ್‌ ಜನರಲ್ ಆಸಿಫ್‌ ಗಫೂರ್‌ ಘಟನೆಯ ಸ್ಥಳಕ್ಕೆ ಭಾರತೀಯ ಪತ್ರಕರ್ತರು ಭೇಟಿ ನೀಡಲಿ ಆಗ ಸತ್ಯ ಏನು ಎಂಬುದು ಗೊತ್ತಾಗುತ್ತದೆ ಎಂದು ಅವರು ಹೇಳಿದ್ದಾರೆ. 

ಫುಲ್ವಾಮಾ ದಾಳಿಯಲ್ಲಿ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯ ಕೈವಾಡವಿರುವುದಾಗಿ ಭಾರತ ಹೇಳಿತ್ತು. ಬಾಲಾಕೋಟ್‌ನಲ್ಲಿ ಜೈಷ್‌–ಎ–ಮೊಹಮ್ಮದ್‌ ಉಗ್ರರ ನೆಲೆಗಳನ್ನು ಧ್ವಂಸ ಮಾಡಿ ಉಗ್ರರನ್ನು ಹತ್ಯೆ ಮಾಡಿರುವುದಾಗಿ ಭಾರತ ಸುಳ್ಳು ಹೇಳಿದೆ, ಆದರೆ ಭಾರತ ನಡೆಸಿದ ವಾಯು ದಾಳಿಯಲ್ಲಿ ಉಗ್ರರು ಸತ್ತಿಲ್ಲ ಹಾಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಪಾಕಿಸ್ತಾನ ಪ್ರತಿಪಾದಿಸಿದೆ.

ಈ ವಿಚಾರದಲ್ಲಿ ಭಾರತ ಪದೇ ಪದೇ ಸುಳ್ಳು ಹೇಳುತ್ತಿದೆ, ಒಂದು ಜವಾಬ್ದಾರಿಯುತ ದೇಶವಾಗಿರುವ ಭಾರತ ಕಳೆದ ಎರಡು ತಿಂಗಳಲ್ಲಿ ಲೆಕ್ಕವಿಲ್ಲದಷ್ಟು ಸುಳ್ಳು ಹೇಳಿದೆ, ಇದಕ್ಕೆ ಪಾಕಿಸ್ತಾನ ಯಾವುದೇ ಪ್ರತಿಕ್ರಿಯೆಗಳನ್ನು ನೀಡಿಲ್ಲ ಎಂದು ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು