ಶುಕ್ರವಾರ, ಆಗಸ್ಟ್ 23, 2019
25 °C

ಹಫೀಜ್ ಸಯೀದ್ ತಪ್ಪಿತಸ್ಥ: ಪಾಕಿಸ್ತಾನ ಸಿಟಿಡಿ ಘೋಷಣೆ

Published:
Updated:
Prajavani

ಲಾಹೋರ್ (ಪಿಟಿಐ): ಮುಂಬೈ ದಾಳಿಯ ಸಂಚುಕೋರ ಹಾಗೂ ಜಮಾತ್–ಉದ್– ದಾವಾ (ಜೆಯುಡಿ) ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್‌, ಭಯೋತ್ಪಾದಕ ಕೃತ್ಯಗಳಿಗೆ ಆರ್ಥಿಕ ನೆರವು ನೀಡಿದ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಬುಧವಾರ ಹೇಳಿದೆ.

ಹಫೀಜ್‌ನನ್ನು ಭಾರಿ ಭದ್ರತೆಯಲ್ಲಿ ಗುಜ್ರನ್‌ವಾಲಾದಲ್ಲಿರುವ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಉಗ್ರ ಚಟುವಟಿಕೆಗಳಿಗೆ ಆರ್ಥಿಕ ನೆರವು ನೀಡಿದ ಸಂಬಂಧ ಆರೋಪ ಪಟ್ಟಿಯನ್ನು ಈ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಆದರೆ ಪ್ರಕರಣ ಪಂಜಾಬ್‌ ಪ್ರಾಂತದ ಮಂಡಿ ಬಹಾಉದ್ದೀನ್ ವ್ಯಾ‍ಪ್ತಿಗೆ ಬರುವುದರಿಂದ,
ಗುಜರಾತ್ ಎಟಿಸಿಗೆ ವರ್ಗಾಯಿಸಬೇಕೆಂದು ಪೊಲೀಸ್ ಅಧಿಕಾರಿ ಇದೇ ವೇಳೆ ನ್ಯಾಯಾಲಯಕ್ಕೆ ಮನವಿ ಮಾಡಿದರು.

Post Comments (+)