ಶನಿವಾರ, ಮೇ 30, 2020
27 °C

ನಿರ್ಬಂಧ: ನಿಲುವು ಸ್ಪಷ್ಟಪಡಿಸದ ಅಮೆರಿಕ

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ರಷ್ಯಾದಿಂದ ಬಹುಕೋಟಿ ಡಾಲರ್‌ ಮೊತ್ತದ ಕ್ಷಿಪಣಿಗಳನ್ನು ಖರೀದಿಸಿದರೆ, ಭಾರತದ ಮೇಲೆ ನಿರ್ಬಂಧ ಹೇರಬೇಕಾಗುತ್ತದೆ ಎಂದಿದ್ದ ಅಮೆರಿಕ, ಈಗ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿರ್ಬಂಧ ಹೇರುತ್ತೇನೆ ಎಂದಾಗಲಿ, ಹೇರುವುದಿಲ್ಲ ಎಂದಾಗಲಿ ಹೇಳಿಲ್ಲ ಎಂದು ಅಮೆರಿಕ ಸ್ಪಷ್ಟವಾಗಿ ತಿಳಿಸಿಲ್ಲ.

‘ತಂತ್ರಜ್ಞಾನ ಮತ್ತು ಇದಕ್ಕೆ ಸಂಬಂಧಿಸಿದ ವೇದಿಕೆಗಳಲ್ಲಿ ಈ ಕುರಿತು ಭಾರತ ತನ್ನ ಸ್ಪಷ್ಟ ನಿಲುವನ್ನು ಹೇಳದ ಹೊರತು, ನಿರ್ಬಂಧ ಹೇರುವ ವಿಷಯದ ಬಗ್ಗೆ ಅಮೆರಿಕವೂ ತನ್ನ ಅಂತಿಮ ನಿರ್ಧಾರ ಪ್ರಕಟಿಸಲಾರದು’ ಎಂದು ಅಮೆರಿಕದ ಉನ್ನತ ರಾಯಭಾರ ಅಧಿಕಾರಿಗಳು ಹೇಳಿದ್ದಾರೆ.

ಈ ರಕ್ಷಣಾ ವ್ಯವಸ್ಥೆ ಖರೀದಿ ಸಂಬಂಧ ಭಾರತ 2018ರಲ್ಲಿ ರಷ್ಯಾ ಜತೆ ಒಪ್ಪಂದಕ್ಕೆ ಸಹಿ ಹಾಕಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು