ಗುರುವಾರ , ನವೆಂಬರ್ 14, 2019
22 °C

ಫಿಲಿಪ್ಪೀನ್ಸ್: ಗಾಂಧಿ ಪುತ್ಥಳಿ ಅನಾವರಣ

Published:
Updated:

ಮನಿಲಾ: ಇಲ್ಲಿನ ಮಿರಿಯಮ್‌ ಕಾಲೇಜಿನ ಆವರಣದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧಿ ಪುತ್ಥಳಿಯನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಭಾನುವಾರ ಅನಾವರಣಗೊಳಿಸಿದರು. 

ಸ್ಪ್ಯಾನಿಶ್‌ ವಸಹಾತುಶಾಹಿ ವಿರುದ್ಧ ಹೋರಾಡಿದ ಫಿಲಿಪ್ಪೀನ್ಸ್‌ ನಾಯಕ ಜೋಸ್‌ ರಿಜಲ್‌ ಅವರನ್ನು ಸ್ಮರಿಸಿದ ಕೋವಿಂದ್‌ ಅವರು, ಗಾಂಧಿ ಮತ್ತು ರಿಜಲ್ ಅವರ ಹೋರಾಟದಲ್ಲಿದ್ದ ಸಾಮ್ಯತೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. 

ಸಹಭಾಗಿತ್ವ: ಇದಕ್ಕೂ ಮೊದಲು ಭಯೋತ್ಪಾದನೆ ನಿರ್ಮೂಲನೆ, ರಕ್ಷಣೆ ಮತ್ತು ಸಾಗರ ಭದ್ರತೆಯಲ್ಲಿ ರಾಷ್ಟ್ರಗಳ ಸಹಭಾಗಿತ್ವದ ಕುರಿತು ಕೋವಿಂದ್‌ ಮತ್ತು ಫಿಲಿಪ‍್ಪೀನ್ಸ್ ಅಧ್ಯಕ್ಷ ರೋಡ್ರಿಗೊ ಡುಟರ್ಟೆ ಚರ್ಚೆ ನಡೆಸಿದರು. 

ಪ್ರತಿಕ್ರಿಯಿಸಿ (+)