ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಸಿಇಪಿ ಸಭೆ ಇಂದು: ಪ್ರಧಾನಿ ಮೋದಿ ಭಾಗಿ

Last Updated 2 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬ್ಯಾಂಕಾಕ್‌ (ಪಿಟಿಐ/ರಾಯಿಟರ್ಸ್‌): ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರಕ್ಕೆ ಅನುವು ಮಾಡಿಕೊಡುವ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದದ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿಗೆ ಬಂದಿದ್ದಾರೆ.

ಭಾನುವಾರ ಸಭೆ ನಡೆಯಲಿದ್ದು, ಸೋಮವಾರ ಒಪ್ಪಂದ ಅಂತಿಮವಾಗುವ ನಿರೀಕ್ಷೆ ಇದೆ.

‘ಈ ರಾಷ್ಟ್ರಗಳಿಗೆ ಭಾರತದ ಮಾರುಕಟ್ಟೆಗೆ ಪ್ರವೇಶ ನೀಡುವುದು ಮಾತ್ರವಲ್ಲ, ಈ ರಾಷ್ಟ್ರಗಳ ಮಾರುಕಟ್ಟೆಗೆ ಭಾರತದ ಸರಕುಗಳಿಗೆ ಪ್ರವೇಶ ದೊರೆಯಬೇಕು’ ಎಂದು ಮೋದಿ ಹೇಳಿದ್ದಾರೆ.

ಈ ಒಪ್ಪಂದದಿಂದ ದೇಶದ ತಯಾರಿಕಾ ವಲಯ ಮತ್ತು ರೈತರಿಗೆ ಧಕ್ಕೆಯಾಗಲಿದೆ ಎಂದು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ.

ಆಸಿಯಾನ್‌ ಗುಂಪಿನ ಹತ್ತು ರಾಷ್ಟ್ರಗಳು ಮತ್ತು ಭಾರತ, ಚೀನಾ, ಜಪಾನ್, ಆಸ್ಟ್ರೇಲಿಯ ಹಾಗೂ ನ್ಯೂಜಿಲೆಂಡ್‌ ಆರ್‌ಸಿಇಪಿ ಒಪ್ಪಂದಕ್ಕೆ ಸಹಿಹಾಕಲು ಉತ್ಸುಕವಾಗಿವೆ.

***
ಈ ಒಪ್ಪಂದ ಏರ್ಪಟ್ಟರೆ ದೇಶದ ರೈತರು, ಸಣ್ಣ ವ್ಯಾಪಾರಿಗಳು ಮತ್ತು ಉದ್ಯಮಿಗಳು ಹಿಂದೆಂದೂ ಕಂಡರಿಯದ ಕಷ್ಟವನ್ನು ಅನುಭವಿಸಬೇಕಾಗುತ್ತದೆ.
-ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷೆ

**

ಅಂಕಿ ಅಂಶಗಳು
* 53 % -ವಿಶ್ವದ ಜನಸಂಖ್ಯೆಯಲ್ಲಿ ಈ ದೇಶಗಳ ಜನಸಂಖ್ಯೆಯ ಪ್ರಮಾಣ

*39 % -ಜಾಗತಿಕ ವಾಣಿಜ್ಯ ವಹಿವಾಟಿನಲ್ಲಿ ಈ ದೇಶಗಳ ಪಾಲು

* ಈ ಒಪ್ಪಂದವು ಅಸ್ತಿತ್ವಕ್ಕೆ ಬಂದರೆ ಈ 16 ದೇಶಗಳದ್ದು ವಿಶ್ವದ ಅತಿ ದೊಡ್ಡ ಆರ್ಥಿಕ ಒಕ್ಕೂಟವಾಗಲಿದೆ. ಜಾಗತಿಕ ವಾಣಿಜ್ಯ ವಹಿವಾಟಿನಲ್ಲಿ ಇದರ ಪ್ರಮಾಣ ಶೇ 60 ದಾಟುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT