ಇರಾಕ್: ಅಮೆರಿಕ ರಾಯಭಾರ ಕಚೇರಿ ಬಳಿ ರಾಕೆಟ್ ದಾಳಿ

ಬಾಗ್ದಾದ್: ಇರಾಕ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿಯ ಸೇನಾ ನೆಲೆ ಮೇಲೆ ಭಾನುವಾರ ಸರಣಿ ರಾಕೆಟ್ ದಾಳಿ ನಡೆದಿದೆ.
ಅಮೆರಿಕದ ಸೇನಾ ತುಕಡಿಯನ್ನು ಈ ಸೇನಾ ನೆಲೆಯಲ್ಲಿ ನಿಯೋಜಿಸಲಾಗಿತ್ತು. ಈ ದಾಳಿಯಲ್ಲಿ ಯಾವುದೇ ಸಾವು–ನೋವು ಸಂಭವಿಸಿಲ್ಲ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರಗಾಮಿ ಸಂಘಟನೆಗಳ ವಿರುದ್ಧ ಹೋರಾಟ ನಡೆಸಲು ‘ಯೂನಿಯನ್–3’ ಎಂದು ಕರೆಯಲಾಗುವ ಈ ಸೇನೆ ನೆಲೆಯನ್ನು 2014ರಲ್ಲಿ ಸ್ಥಾಪಿಸಲಾಗಿದ್ದು, ಅಮೆರಿಕ ನೇತೃತ್ವದ ಮಿತ್ರಪಡೆಗಳ ಪ್ರಧಾನ ಕಚೇರಿಯೂ ಆಗಿತ್ತು.
ಹೆಚ್ಚು ಭದ್ರತೆ ಇರುವ ಹಸಿರು ವಲಯ, ಅಮೆರಿಕದ ಸೇನಾ ತುಕಡಿ ಯೂನಿಯನ್–3 , ಇರಾನ್‌ನ ಸರ್ಕಾರಿ ಕಟ್ಟಡ, ವಿಶ್ವಸಂಸ್ಥೆಯ ಕಚೇರಿಗಳಿರುವ ಜಾಗದ ಮೇಲೆ ಮೂರು ರಾಕೆಟ್‌ಗಳ ಮೂಲಕ ದಾಳಿ ನಡೆಸಲಾಗಿದೆ ಎಂದು ಇರಾಕ್ ಸೇನೆ ತಿಳಿಸಿದೆ.
ಅಮೆರಿಕ ರಾಯಭಾರಿ ಕಚೇರಿ ಮತ್ತು ಸೇನೆಯನ್ನು ಗುರಿಯಾಗಿರಿಸಿಕೊಂಡು ಕಳೆದ ಅಕ್ಟೋಬರ್‌ನಿಂದ ಪದೇ ಪದೇ ದಾಳಿ ನಡೆಸಲಾಗಿದ್ದು, ಇದೀಗ ನಡೆದಿರುವುದು 19ನೇ ಬಾರಿಯಾಗಿದೆ. ಇರಾಕ್‌ನಲ್ಲಿ 5,200 ಅಮೆರಿಕ ಯೋಧರನ್ನು ನಿಯೋಜಿಸಲಾಗಿದೆ.
ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.