ಶುಕ್ರವಾರ, ಆಗಸ್ಟ್ 23, 2019
25 °C

ಸೌದಿ ಮಹಿಳೆಯರ ವಿದೇಶ ಪ್ರಯಾಣಕ್ಕಿಲ್ಲ ನಿರ್ಬಂಧ

Published:
Updated:

ರಿಯಾದ್‌: ಪುರುಷ ಪಾಲಕರ ಅನುಮತಿ ಇಲ್ಲದೆಯೇ ಸೌದಿ ಅರೇಬಿಯಾ ಮಹಿಳೆಯರು ಇನ್ನು ಮುಂದೆ ವಿದೇಶ ಪ್ರಯಾಣ ಮಾಡ ಬಹುದು ಎಂದು ಸೌದಿ ಸರ್ಕಾರ ಗುರುವಾರ ಹೇಳಿದೆ.

ಅರ್ಜಿ ಸಲ್ಲಿಸಿದ ಯಾವುದೇ ಸೌದಿ ಅರೇಬಿಯಾದ ನಾಗರಿಕರಿಗೆ ಪಾಸ್‌ ಪೋರ್ಟ್‌ ನೀಡಲಾಗುವುದು ಎಂದು ಸರ್ಕಾರದ ಪತ್ರಿಕೆ ‘ಉಮ್‌–ಅಲ್‌–ಕುರಾ’ ದಲ್ಲಿ ಸರ್ಕಾರ ಹೇಳಿದೆ.  21 ವರ್ಷ ತುಂಬಿದ ನಂತರ ಮಹಿಳೆಯರು ತಮ್ಮ ಪಾಲಕರ ಅನುಮತಿಗೆ ಕಾಯದೇ, ದೇಶವನ್ನು ಬಿಡಬಹುದು ಎಂದು ಸರ್ಕಾರದ ಪರ ಪತ್ರಿಕೆ ಒಕಾಜ್‌ ವರದಿ ಮಾಡಿದೆ.

ಈ ಆದೇಶವು ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಿದಂತಾಗಿದೆ. ಇದು ‘ಸೌದಿ ಮಹಿಳೆಯರಿಗೆ  ಒಂದು ದೈತ್ಯ ಜಿಗಿತ’ ಎಂದು ಮತ್ತೊಂದು ಪತ್ರಿಕೆ ಈ ಹೇಳಿದೆ.

Post Comments (+)