ಶುಕ್ರವಾರ, ಜುಲೈ 30, 2021
27 °C

ಚೀನಾದಲ್ಲಿ ಮತ್ತೆ ಸೋಂಕು ಪತ್ತೆ: ಬೀಜಿಂಗ್‌ನ ಕೆಲ ಮಾರುಕಟ್ಟೆಗಳು ಲಾಕ್‌ಡೌನ್‌ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ವಿದೇಶದಿಂದ ಬಂದವರಲ್ಲದೇ, ಬೀಜಿಂಗ್‌ನಲ್ಲಿ ಆಂತರಿಕವಾಗಿ ಪ್ರಸರಣೆಗೊಂಡಿರುವ ಆರು ಹೊಸ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಅಲ್ಲಿನ ಹಲವಾರು ಮಾರುಕಟ್ಟೆಗಳನ್ನು ಬಂದ್‌ ಮಾಡಲಾಗಿದೆ. 

ಬೀಜಿಂಗ್‌ನಲ್ಲಿ ಆಂತರಿಕವಾಗಿ ಪತ್ತೆಯಾದ 6 ಪ್ರಕರಣಗಳು ಸೇರಿದಂತೆ ದೇಶದಲ್ಲಿ ಶುಕ್ರವಾರ 18 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ (ಎನ್‌ಎಚ್‌ಸಿ) ಶನಿವಾರ ತಿಳಿಸಿದೆ.

ಶುಕ್ರವಾರ, ಲಕ್ಷಣರಹಿತ 7 ಹೊಸ ಪ್ರಕರಣಗಳು ವರದಿಯಾಗಿವೆ. ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ. ಇಂಥ 98 ಮಂದಿಯನ್ನು ಈ ವರೆಗೆ ಪ್ರತ್ಯೇಕ ಮಾಡಲಾಗಿದೆ ಎಂದೂ ಅದು ಹೇಳಿದೆ.

ಆಮದು ಮಾಡಿಕೊಳ್ಳಲಾಗುವ ಸಾಲ್ಮನ್‌ ಮೀನುಗಳನ್ನು ಕತ್ತರಿಸುವ ಕ್ಸಿನ್‌ಫಾಡಿ ಮಾರುಕಟ್ಟೆಯಲ್ಲಿ ಶುಕ್ರವಾರ 7 ಪ್ರಕರಣಗಳು ಪತ್ತೆಯಾದವು. ಗಿ ಮಾರುಕಟ್ಟೆಯನ್ನು ಬಂದ್‌ ಮಾಡಲಾಗಿದೆ. ಅಲ್ಲಿನ 9 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ವರದಿಗಳು ನೆಗೆಟಿವ್‌ ಬಂದಿದೆ. ಆದರೂ ಅವರನ್ನು ಪ್ರತ್ಯೇಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಇದಲ್ಲದೇ ಕೆಲ ಮಾಂಸ ಮಾರುಕಟ್ಟೆಗಳನ್ನೂ ಲಾಕ್‌ಡೌನ್‌ ಮಾಡಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು