ಗುರುವಾರ , ಡಿಸೆಂಬರ್ 3, 2020
19 °C

ದಕ್ಷಿಣ ಕೊರಿಯಾ ವಿರುದ್ದ 1.2 ಕೋಟಿ ಕರಪತ್ರ: ಉತ್ತರ ಕೊರಿಯಾ

ಎಪಿ Updated:

ಅಕ್ಷರ ಗಾತ್ರ : | |

ಕೊರಿಯಾ ಪೆನಿನ್ಸುಲಾ ಭೂಪಟದ ಪೋಸ್ಟರ್‌ ಹಿಡಿದಿರುವ ದಕ್ಷಿಣ ಕೊರಿಯಾ ನಾಗರಿಕರು–ಪಿಟಿಐ ಸಂಗ್ರಹ ಚಿತ್ರ

ಸೋಲ್‌: ದಕ್ಷಿಣ ಕೊರಿಯಾ ವಿರುದ್ದ 1.2 ಕೋಟಿ ಕರಪತ್ರ ಹಂಚಲು ಸಿದ್ಧವಿರುವುದಾಗಿ ಉತ್ತರ ಕೊರಿಯಾ ತಿಳಿಸಿದೆ.

ಉತ್ತರ ಕೊರಿಯಾದ ಈ ಕ್ರಮದಿಂದ ಉಭಯ ದೇಶಗಳ ನಡುವಣ ಸಂಬಂಧ ಹದಗೆಡಲಿದ್ದು, ತಕ್ಷಣವೇ ಈ ಕಾರ್ಯ ಸ್ಥಗಿತಗೊಳಿಸುವಂತೆ ದಕ್ಷಿಣ ಕೊರಿಯಾ ಒತ್ತಾಯಿಸಿದೆ.

‘ಸದ್ಯಕ್ಕೆ 3000 ಬಲೂನ್‌ಗಳಿಗೆ ಕರಪತ್ರಗಳನ್ನು ಕಟ್ಟಿ ದಕ್ಷಿಣ ಕೊರಿಯಾದತ್ತ ಹಾರಿಸಲಾಗುವುದು. ನಮ್ಮ ಜನರ ಆಕ್ರೋಶವನ್ನು ತಿಳಿಸಲು ಕರಪತ್ರಗಳನ್ನು ಹಂಚಲು ಯೋಜನೆ ರೂಪಿಸಿದ್ದೇವೆ’ ಎಂದು ಉತ್ತರ ಕೊರಿಯಾ ತಿಳಿಸಿದೆ.

ಗಡಿಯಲ್ಲಿನ ಸೇನಾ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ದಕ್ಷಿಣ ಕೊರಿಯಾ ಜತೆ 2018ರಲ್ಲಿ ಮಾಡಿಕೊಂಡ ಒಪ್ಪಂದವನ್ನು ರದ್ದುಗೊಳಿಸಲು ಕ್ರಮಕೈಗೊಂಡಿರುವುದಾಗಿಯೂ ಅದು ತಿಳಿಸಿದೆ.

ಪ್ರಸ್ತುತ ಹವಾಮಾನ ಪರಿಸ್ಥಿತಿ ಬಲೂನ್‌ಗಳನ್ನು ಹಾರಿಸಲು ಸೂಕ್ತವಾಗಿಲ್ಲ. ಹೀಗಾಗಿ, ಡ್ರೊನ್‌ಗಳ ಮೂಲಕ ಕರಪತ್ರಗಳನ್ನು ಹಂಚಬಹುದು. ಆದರೆ, ದಕ್ಷಿಣ ಕೊರಿಯಾ ವಾಯು ಪ್ರದೇಶದಲ್ಲಿ ಡ್ರೋನ್‌ಗಳು ಹಾರಾಟ ನಡೆಸಿದರೆ ತಕ್ಷಣವೇ ಕ್ರಮಕೈಗೊಂಡು ಪ್ರತ್ಯುತ್ತರ ನೀಡಬಹುದು. ಇದರಿಂದ, ಮತ್ತೊಮ್ಮೆ ದಕ್ಷಿಣ ಮತ್ತು ಉತ್ತರ ಕೊರಿಯಾ ನಡುವೆ ಸಂಘರ್ಷ ಸಂಭವಿಸಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು