ಗುರುವಾರ , ಸೆಪ್ಟೆಂಬರ್ 24, 2020
27 °C

ಶ್ರೀಲಂಕಾ: ಉಸ್ತುವಾರಿ ಸಚಿವ ಸಂಪುಟ ರಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರು 16 ಸದಸ್ಯರ ಉಸ್ತುವಾರಿ ಸಚಿವ ಸಂಪುಟ ರಚಿಸಿದ್ದು, ತಮ್ಮ ಇಬ್ಬರು ಸಹೋದರರಿಗೆ ಮಹತ್ವದ ಖಾತೆ ಹಂಚಿಕೆ ಮಾಡಿದ್ದಾರೆ. 

ಇದೇ ವೇಳೆ ಮಾತನಾಡಿದ ಅಧ್ಯಕ್ಷ ಗೋಟಬಯಾ, ಶೀಘ್ರ ಸಾರ್ವತ್ರಿಕ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.

ಪ್ರಧಾನಿ ಮಹಿಂದಾ ರಾಜಪಕ್ಸೆ(74) ಅವರಿಗೆ ರಕ್ಷಣೆ ಮತ್ತು ಹಣಕಾಸು ಖಾತೆ ನೀಡಲಾಗಿದೆ. ಸಂಪುಟಕ್ಕೆ ಸೇರ್ಪಡೆಯಾಗಿರುವ ಗೋಟಬಯಾ ಅವರ ಇನ್ನೊಬ್ಬ ಹಿರಿಯ ಸಹೋದರ ಚಮಲ್‌ ರಾಜಪಕ್ಸೆ ಅವರಿಗೆ ವ್ಯಾಪಾರ ಮತ್ತು ಆಹಾರ ಭದ್ರತಾ ಖಾತೆಯ ಜವಾಬ್ದಾರಿ ನೀಡಲಾಗಿದೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರು ತಮಿಳರಿಗೂ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಹಿರಿಯ ಮಾರ್ಕ್ಸ್‌ವಾದಿ ದಿನೇಶ್‌ ಗುಣವರ್ಧನ್‌(70) ವಿದೇಶಾಂಗ ವ್ಯವಹಾರಗಳ ಖಾತೆ ನೀಡಲಾಗಿದೆ.

ದೇಶದಲ್ಲಿ ಆಗಸ್ಟ್‌ 2020ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು