ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರಾಸ್ತ್ರ ಖರೀದಿ ಸಮರ್ಥಿಸಿಕೊಂಡ ತೈವಾನ್

Last Updated 13 ಜುಲೈ 2019, 20:00 IST
ಅಕ್ಷರ ಗಾತ್ರ

ತೈಪೆ: ಅಮೆರಿಕದಿಂದ ₹15,083 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಸುವ ಒಪ್ಪಂದವನ್ನು ತೈವಾನ್ ಶನಿವಾರ ಸಮರ್ಥಿಸಿಕೊಂಡಿದೆ.

‘ಚೀನಾದ ಸೇನೆಯಿಂದ ಅಪಾಯ ಎದುರಾಗುವ ಭೀತಿ ಹೆಚ್ಚುತ್ತಿರುವುದರಿಂದ, ದೇಶದ ರಕ್ಷಣಾ ಸಾಮರ್ಥ್ಯ ಬಲಪಡಿಸಿಕೊಳ್ಳಲು ಈ ಶಸ್ತ್ರಾಸ್ತ್ರ ಖರೀದಿ ನೆರವಾಗಲಿದೆ’ ಎಂದು ರಕ್ಷಣಾ ಸಚಿವಾಲಯ ಹೇಳಿದೆ.ತೈವಾನ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ ಅಮೆರಿಕದ ಯಾವುದೇ ಕಂಪನಿಗಾದರೂ ನಿರ್ಬಂಧ ಹೇರಲಾಗುವುದು ಎಂದು ಚೀನಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ತೈವಾನ್ ಈ ಪ್ರತಿಕ್ರಿಯಿಸಿದೆ.

ಭೂಕಂಪನ: 51 ಮಂದಿಗೆ ಗಾಯ
ಮನಿಲಾ (ಎಎಫ್‌ಪಿ): ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಶನಿವಾರ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪನದಲ್ಲಿ 5.8 ತೀವ್ರತೆ ದಾಖಲಾಗಿದೆ. 51 ಮಂದಿಗೆ ಗಾಯಗಳಾಗಿದ್ದು, ಹಲವು ಮನೆಗಳು, ಚರ್ಚ್‌, ಕಟ್ಟಡಗಳಿಗೆ ಹಾನಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT