ಬುಧವಾರ, ಏಪ್ರಿಲ್ 1, 2020
19 °C

ಕೊರೊನಾ ವೈರಸ್ ಸೋಂಕಿಗೆ ಇರಾನ್‌ನಲ್ಲಿ ಮತ್ತೆ ಮೂವರು ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೆಹರಾನ್‌: ಕೊರೊನಾ ವೈರಸ್‌ ಸೋಂಕಿಗೆ ಇರಾನ್‌ನಲ್ಲಿ ಮತ್ತೆ 3 ಜನರು ಮೃತಪಟ್ಟಿದ್ದಾರೆ ಎಂದು ಇಲ್ಲಿನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೊರೊನಾ ವೈರಸ್‌ಗೆ ಚೀನಾದ ಬಳಿಕ ಅತೀ ಹೆಚ್ಚು ಜನರು ಇರಾನ್‌ನಲ್ಲಿ ಮೃತರಾಗಿದ್ದಾರೆ

ಈವರೆಗೆ ಇರಾನ್‌ನಲ್ಲಿ ಕೊರೊನಾ ವೈರಸ್ ಸೋಂಕಿಗೆ ಒಟ್ಟು 15 ಜನರು ಮೃತಪಟ್ಟಿದ್ದಾರೆ.

ಕೊವಿಡ್‌–19 ವೈರಸ್‌ಗೆ ಕಳೆದ ಬುಧವಾರ ಕೊಮ್ ಪ್ರಾಂತ್ಯದಲ್ಲಿ ಇಬ್ಬರು ಮೃತಪಟ್ಟಿದ್ದರು. ಇಲ್ಲಿನ ಸರ್ಕಾರ ಪರಿಸ್ಥಿತಿಯನ್ನು ಹತೋಟಿಗೆ ತರಲು ತೀವ್ರ ಪ್ರಯತ್ನ ಮಾಡುತ್ತಿದೆ ಎಂದು ಮಾಧ್ಯಮಗಳು ಹೇಳಿವೆ.

ಮೃತರಲ್ಲಿ ಇಬ್ಬರು ಮರ್ಕಝಿ ಪ್ರಾಂತ್ಯದವರಾಗಿದ್ದು, ಮತ್ತೊಬ್ಬ ಅಲಿಬೊಜ್‌ನವರಾಗಿದ್ದಾರೆ. 

ಮೃತರಲ್ಲಿ 87 ವಯಸ್ಸಿನ ಮಹಿಳೆ ಇದ್ದು ಅವರು ಕಿಡ್ನಿ, ಲಿವರ್‌ ಮತ್ತು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರಲ್ಲಿ ಇನ್ನೊಬ್ಬರು 82 ವಯಸ್ಸಿನವರಾಗಿದ್ದು ಅವರಿಗೆ ರಕ್ತ ಮತ್ತು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು ಎಂದು ಇಲ್ಲಿನ ಸ್ಥಳೀಯ ವೈದ್ಯಕೀಯ ವಿಶ್ವವಿದ್ಯಾಲಯದ ಮುಖ್ಯಸ್ಥ ಅಬ್ಬಾಸ್‌ ನಿಕ್ರಾವೇಶ್ ಹೇಳಿದ್ದಾರೆ.

ಈವರೆಗೆ ಇರಾನ್‌ನ ಏಳು ನಗರಗಳಲ್ಲಿ ಮಾರಕ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ.

ಆಫ್ಘನ್‌ ಮೂಲದ 78 ವಯಸ್ಸಿನ ಮಹಿಳೆ ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.  ಕೊರೊನಾ ಪೀಡಿತರ ಸಂಖ್ಯೆ 61ಕ್ಕೆ ಏರಿದೆ ಎಂದು ಇಲ್ಲಿನ ಸರ್ಕಾರ ದೃಢಪಡಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು