ಸೋಮವಾರ, ಏಪ್ರಿಲ್ 6, 2020
19 °C

ಚೀನಾದಲ್ಲಿ ಕೊರೊನಾ ವೈರಸ್: 1,800ರ ಗಡಿ ದಾಟಿದ ಸೋಂಕು ಪೀಡಿತರ ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ಬೀಜಿಂಗ್: ಚೀನಾದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೊನಾ ವೈರಸ್ ಮತ್ತಷ್ಟು ಮಂದಿಯನ್ನು ಬಲಿಪಡೆದುಕೊಂಡಿದ್ದು, ಮೃತರ ಸಂಖ್ಯೆ 1,800ರ ಗಡಿ ದಾಟಿದೆ. 

ಕಳೆದ 24 ಗಂಟೆಗಳಲ್ಲಿ 98 ಜನರು ಮೃತಪಟ್ಟಿದ್ದು, ಮೃತರ ಸಂಖ್ಯೆ 1,868ಕ್ಕೆ ಏರಿಕೆಯಾಗಿದೆ ಎಂದು ಚೀನಾದ ಆರೋಗ್ಯ ಸಮಿತಿ ಮಂಗಳವಾರ ತಿಳಿಸಿದೆ.

ಚೀನಾದಾದ್ಯಂತ ಹೊಸದಾಗಿ 1,886 ಪ್ರಕರಣಗಳು ದೃಢಪಟ್ಟಿದ್ದು, ಕೊರೊನಾ ವೈರಸ್ ಸೋಂಕು ತಗುಲಿರುವವರ ಸಂಖ್ಯೆ 72,436ಕ್ಕೆ ಏರಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: 

ಸೋಂಕಿನಿಂದ ಈಗಾಗಲೇ 1,701 ಜನರು ಚೇತರಿಸಿಕೊಂಡಿದ್ದು, ಇದುವರೆಗೂ ಒಟ್ಟು 12,552 ಕೊರೋನ ವೈರಸ್ ಸೋಂಕು ಪೀಡಿತ ರೋಗಿಗಳನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) COVID-19 ಎಂದು ಕರೆಯಲ್ಪಡುವ ಕೊರೊನಾ ವೈರಸ್ ಸೋಂಕು ಮೊದಲ ಬಾರಿಗೆ 2019ರ ಡಿಸೆಂಬರ್ ಅಂತ್ಯದಲ್ಲಿ ಹುಬೆ ಪ್ರಾಂತ್ಯದ ವುಹಾನ್‌ನಿಂದ ಹರಡಲು ಪ್ರಾರಂಭವಾಯಿತು. ಅಂದಿನಿಂದ ಇದುವರೆಗೂ ಸುಮಾರು 20ಕ್ಕೂ ಹೆಚ್ಚು ದೇಶಗಳಿಗೆ ಕೊರೊನಾ ವೈರಸ್ ಸೋಂಕು ವ್ಯಾಪಿಸಿದೆ. 

ಇದನ್ನೂ ಓದಿ: 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು