ಬುಧವಾರ, ಜೂನ್ 3, 2020
27 °C

ಕೊರೊನಾ | ಟೊಯೊಟಾ ಕಾರು ಉತ್ಪಾದನೆ ಸ್ಥಗಿತ: ಅರೆಕಾಲಿಕ ಕಾರ್ಮಿಕರಿಗೆ ಸಂಬಳ ಕಡಿತ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ರಾಯಿಟರ್ಸ್): ಟೊಯೋಟಾ ಮೋಟಾರ್ ಕಂಪನಿ ತನ್ನ ಉತ್ತರ ಅಮೆರಿಕದ ಆಟೋ ಪ್ಲಾಂಟ್‌ಗಳನ್ನು ಮೇ 4 ಮುಚ್ಚಲು ತೀರ್ಮಾನಿಸಿದ್ದು, ತನ್ನ 5 ಸಾವಿರ ಅರೆಕಾಲಿಕ ಕಾರ್ಮಿಕರಿಗೆ ಸಂಬಳ ನಿಲ್ಲಿಸುವುದಾಗಿ ಪ್ರಕಟಿಸಿದೆ.

ಅಮೆರಿಕಾದಲ್ಲಿ ಕೊರೊನಾ ಸೋಂಕು ತೀವ್ರವಾಗಿರುವ ಪರಿಣಾಮ ಇಲ್ಲಿರುವ ಜಪಾನ್ ಮೂಲದ ಟೊಯೊಟಾ ಕಂಪನಿ ವಾಹನಗಳಿಗೆ ಬೇಡಿಕೆ ಕುಸಿದಿದೆ. ಇದರಿಂದಾಗಿ ಕೆನೆಡಾ, ಮೆಕ್ಸಿಕೋ ಮತ್ತು ಅಮೆರಿಕಾದ ತನ್ನ ಎಲ್ಲಾ ಆಟೋ ಮೊಬೈಲ್ ಮತ್ತು ಕಾಂಪೊನೆಂಟ್ಸ್ ಪ್ಲಾಂಟ್‌‌ಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದೆ.

ಟೊಯೊಟಾ ತನ್ನ ಖಾಯಂ ಕೆಲಸಗಾರರನ್ನು ತೆಗೆದುಹಾಕುವುದಿಲ್ಲ. ಬದಲಿಗೆ ಅರೆಕಾಲಿಕ ಕಾರ್ಮಿಕರಿಗೆ ಗಂಟೆ ಲೆಕ್ಕದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹತ್ತು ದಿನಗಳಲ್ಲಿ ಎರಡು ದಿನಗಳ ವೇತನ ನೀಡಲಾಗುವುದು ಅಥವಾ ಸಂಬಳ ರಹಿತ ರಜೆಯ ಮೇಲೆ ಹೋಗಬಹುದು ಎಂದು ತಿಳಿಸಿದೆ.

ಟೊಯೊಟಾ ಕಂಪನಿಯು ತನಗೆ 5 ಸಾವಿರ ನೌಕರರನ್ನು ಒದಗಿಸಿದ್ದ ಏಜೆನ್ಸಿಗಳಿಗೇ ವಾಪಸ್ ಕಳುಹಿಸಿಕೊಡುವುದಾಗಿ ತಿಳಿಸಿದೆ. ಈ ಮಧ್ಯೆ ತನ್ನ ನೌಕರರಿಗೆ ಎಲ್ಲಾ ಸವಲತ್ತುಗಳನ್ನು ಕಂಪನಿ ನೀಡುತ್ತದೆ ಎಂದು ತಿಳಿಸಿದೆ.

ಕೊರೊನಾ ಸೋಂಕಿನ ಕಾರಣ ಕಾರುಗಳಿಗೆ ಬೇಡಿಕೆ ಕುಸಿದಿರುವ ಕಾರಣ ಹೊಂಡಾ ಮೊಟಾರ್ ಕಂಪನಿ, ನಿಸಾನ್ ಮೊಟಾರ್ ಕಂಪನಿ ಕೂಡ ಅಮೆರಿಕಾದ ಸಾವಿರಕ್ಕೂ ಅಧಿಕ ಮಂದಿ ನೌಕರರನ್ನು ತೆಗೆದುಹಾಕಿರುವುದಾಗಿ ಕಂಪನಿಗಳು ತಿಳಿಸಿವೆ. ಅಲಬಾಮಾ, ಇಂಡಿಯಾನಾ ಮತ್ತು ಓಹಿಯೋದ ಶಾಖೆಗಳಲ್ಲಿ ಸುಮಾರು 18,400 ಕಾರ್ಮಿಕರನ್ನು ಹೊಂದಿರುವ ಹೋಂಡ ಕಂಪನಿಯು ಮಾರ್ಚ್ 23 ರಂದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಮೇ1ರವರೆಗೆ ಕಂಪನಿಯನ್ನು ಮುಚ್ಚಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ. ಅಲ್ಲದೆ, ಭಾನುವಾರದ ವೇಳೆಗೆ ಎಲ್ಲಾ ನೌಕರರಿಗೂ ವೇಳೆಗೆ ಸಂಬಳ ನೀಡುವುದಾಗಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು