ಶನಿವಾರ, ಸೆಪ್ಟೆಂಬರ್ 19, 2020
26 °C

ವಾಷಿಂಗ್‌ಟನ್‌ನಲ್ಲಿ ಹಿಮಪಾತ: ವಿಮಾನ, ರೈಲು ಸಂಚಾರ ಸ್ಥಗಿತ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ವಾಷಿಂಗ್‌ಟನ್: ಅಮೆರಿಕ ರಾಜಧಾನಿ ವಾಷಿಂಗ್‌ಟನ್ ಡಿಸಿಯಲ್ಲಿ ಭಾರಿ ಹಿಮಪಾತವಾಗಿದ್ದು, ರಸ್ತೆ, ರೈಲು ಮತ್ತು ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಉತ್ತರ ಕೆರೊಲಿನಾ ಪ್ರಾಂತ್ಯದಲ್ಲಿ 1.5 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ಹಿಮಪಾತದಿಂದಾಗಿ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ತೊಂದರೆಯಾಯಿತು. ವಾಷಿಂಗ್‌ಟನ್ ನಗರದ ದಕ್ಷಿಣ ಭಾಗದಲ್ಲಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ. ವರ್ಜಿನಿಯಾ ಭಾಗದಿಂದ ಮತ್ತಷ್ಟು ಶೀತಮಾರುತ ಬೀಸುವ ಸಾಧ್ಯತೆ ಇದೆ. ಜನಜೀವನದ ಮೇಲೆ ಪ್ರಾಕೃತಿಕ ವೈಪರೀತ್ಯ ಪರಿಣಾಮಬೀರಿದ್ದು ಕಚೇರಿಗಳಿಗೆ ತೆರಳಲು ಪರದಾಡುವಂತಾಗಿದೆ. ಹಲವು ರೈಲು ಕಂಪನಿಗಳು ನಗರದ ಉತ್ತರ ಭಾಗದಲ್ಲಿ ಮಾತ್ರ ಸೇವೆ ಒದಗಿಸುತ್ತಿದ್ದಾರೆ. ದಕ್ಷಿಣ ಭಾಗದಲ್ಲಿರುವವರ ಹೆಚ್ಚು ಕಷ್ಟ ಅನುಭವಿಸಬೇಕಾಗಿದೆ.

ಉತ್ತರ ಕೆರೊಲಿನ, ದಕ್ಷಿಣ ಕೆರೊಲಿನ, ಟೆನ್ನೆಸೆಸ್ ಮತ್ತು ವರ್ಜೀನಿಯಾ ಪ್ರಾಂತ್ಯಗಳ ಹಲವು ವಿಮಾನ ನಿಲ್ದಾಣಗಳಲ್ಲಿ ದೈನಂದಿನ ಕಾರ್ಯಾಚರಣೆಗೆ ತೊಂದರೆಯಾಗಿದೆ. ಈ ಊರುಗಳಿಗೆ ಬರಬೇಕಿದ್ದ ಪ್ರಯಾಣಿಕರು ಅಕ್ಕಪಕ್ಕದ ಊರುಗಳಿಗೆ ತೆರಳಲು ಹೆಚ್ಚುವರಿ ಶುಲ್ಕವಿಲ್ಲದೆ ಯಾವುದೇ ವಿಮಾನ ಕಂಪನಿಗಳ ಸೇವೆ ಪಡೆದುಕೊಳ್ಳಬಹುದು ಎಂದು ಅಮೆರಿನ್, ಡೆಲ್ಟಾ ಕಂಪನಿಗಳು ಪ್ರಕಟಿಸಿವೆ. ರೈಲು ಕಂಪನಿಗಳು ಇದೇ ಮಾರ್ಗ ತುಳಿದಿವೆ.

ಭಾನುವಾರ ಮುಂಜಾನೆಯವರೆಗೆ ಒಟ್ಟು 1,600 ವಿಮಾನಗಳ ಸಂಚಾರಕ್ಕೆ ಧಕ್ಕೆಯಾಗಿದೆ ಎಂದು FlightAware.com ವರದಿ ಮಾಡಿದೆ. ಸೋಮವಾರದಿಂದಾಚೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಬಹುದು. ವಿಮಾನ ನಿಲ್ದಾಣಗಳ ರನ್ ವೇ, ಪಾರ್ಕಿಂಗ್ ಸ್ಥಳಗಳಲ್ಲಿ ಮಂಜು ಬಿದ್ದಿದೆ. ಅಮೆರಿಕದ ಉತ್ತರ ಕೆರೊಲಿನ, ವರ್ಜಿನಿಯಾ, ಟೆನ್ನೆಸ್ಸೀ ಪ್ರಾಂತ್ಯಗಳಿಗೆ ಹೊರಡುವ ಮೊದಲು ಹವಾಮಾನ ಪರಿಸ್ಥಿತಿ, ಸಾರಿಗೆ ಸೇವೆಗಳ ಸ್ಥಿತಿಗತಿ ತಿಳಿದುಕೊಳ್ಳುವುದು ಒಳಿತು. ಪ್ರವಾಸಿಗರಿಗೆ ವಿಮಾನ ನಿಲ್ದಾಣ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು