ಶುಕ್ರವಾರ, ಫೆಬ್ರವರಿ 28, 2020
19 °C

ವಾಗ್ದಂಡನೆ ಉರುಳಿನಿಂದ ಡೊನಾಲ್ಡ್ ಟ್ರಂ‍ಪ್‌ ಪಾರು?

ಪಿಟಿಐ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ದ ವಿರೋಧ ಪಕ್ಷ ಡೆಮಾಕ್ರಟಿಕ್‌ ಪಾರ್ಟಿ ಮಂಡಿಸಿರುವ ವಾಗ್ದಂಡನೆ ನಿರ್ಣಯಕ್ಕೆ ಸೋಲಾಗುವ ಎಲ್ಲ ಲಕ್ಷಣಗಳಿವೆ.

ರಿಪಬ್ಲಿಕನ್‌ ಪಾರ್ಟಿ ಹಿಡಿತದಲ್ಲಿರುವ ಅಮೆರಿಕದ ಸೆನೆಟ್‌, ಟ್ರಂಪ್‌ ವಿರುದ್ಧ ಹೊಸದಾಗಿ ಸಾಕ್ಷ್ಯಗಳನ್ನು ಮತ್ತು ದಾಖಲೆಗಳನ್ನು ಪರಿಗಣಿಸಬೇಕು ಎಂಬ ವಿರೋಧ ಪಕ್ಷದ ಸೂಚನೆಯನ್ನು ಶುಕ್ರವಾರ ತಿರಸ್ಕರಿಸಿದೆ. ಹೊಸ ಸಾಕ್ಷ್ಯಗಳನ್ನು ಪರಿಗಣಿಸಬೇಕು ಎಂಬ ನಿರ್ಣಯದ ವಿರುದ್ಧವಾಗಿ 51 ಹಾಗೂ ಪರವಾಗಿ 49 ಮತಗಳು ಚಲಾವಣೆ ಗೊಂಡವು.

ಇದು, ಟ್ರಂಪ್‌ ಅವರನ್ನು ವಾಗ್ದಂಡನೆ ಆರೋಪಗಳಿಂದ ಮುಕ್ತಗೊಳಿಸುವ ಸೂಚನೆ ಎನ್ನಲಾಗುತ್ತಿದೆ. 100 ಸದಸ್ಯ ಬಲದ ಸೆನೆಟ್‌ನಲ್ಲಿ ಆಡಳಿತಾರೂಢ ರಿಪಬ್ಲಿಕನ್‌ ಪಾರ್ಟಿ ಸದಸ್ಯರ ಸಂಖ್ಯೆ 53 ಇದ್ದು, ಡೆಮಾಕ್ರಟಿಕ್‌ ಪಾರ್ಟಿ 47 ಸದಸ್ಯರನ್ನು ಹೊಂದಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು