ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಹುಬಲಿ ಚಿತ್ರದ ಎಡಿಟೆಡ್‌ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡ ಟ್ರಂಪ್‌

Last Updated 23 ಫೆಬ್ರುವರಿ 2020, 2:29 IST
ಅಕ್ಷರ ಗಾತ್ರ

ವಾಷಿಂಗ್ಟನ್: ಎರಡು ದಿನಗಳ ಪ್ರವಾಸಕ್ಕಾಗಿ ಇದೇ 24ರಂದುಭಾರತಕ್ಕೆ ಆಗಮಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ‘ಭಾರತದ ಸ್ನೇಹಿತರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ,’ ಎಂಬ ಒಕ್ಕಣೆಯೊಂದಿಗೆ ಟ್ವೀಟ್‌ವೊಂದನ್ನು ರೀಟ್ವೀಟ್‌ ಮಾಡಿಕೊಂಡಿದ್ದಾರೆ.

ರಾಜಮೌಳಿ ನಿರ್ದೇಶನದ ಜನಪ್ರಿಯ ಸಿನಿಮಾ‘ಬಾಹುಬಲಿ’ಯ ಎಡಿಟ್‌ ಮಾಡಲಾದ ವಿಡಿಯೊ ತುಣುಕೊಂದನ್ನುSol ಎಂಬ ವೆರಿಫೈ ಅಲ್ಲದ ಟ್ವಿಟರ್‌ ಖಾತೆಯಲ್ಲಿಟ್ವೀಟ್‌ ಮಾಡಲಾಗಿತ್ತು. ಅದರಲ್ಲಿ ಪ್ರಬಾಸ್‌ ಪಾತ್ರಕ್ಕೆ ಟ್ರಂಪ್‌ ಮುಖವನ್ನು ಹೊಂದಿಸಲಾಗಿದೆ. ಈ ಟ್ವೀಟ್‌ ಅನ್ನು ಟ್ರಂಪ್‌ ರೀಟ್ವೀಟ್‌ ಮಾಡಿಕೊಂಡಿದ್ದಾರೆ. ಅದರ ಜತೆಗೆ ಭಾರತದ ಸ್ನೇಹಿತರೊಂದಿಗೆ ಇರಲು ಎದುರು ನೋಡುತ್ತಿದ್ದೇನೆ ಎಂದು ಟ್ರಂಪ್‌ ಬರೆದುಕೊಂಡಿದ್ದಾರೆ.

ಎಡಿಟ್‌ ಮಾಡಲಾದ ಬಾಹುಬಲಿ ಚಿತ್ರದ ವಿಡಿಯೋದಲ್ಲಿ ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌, ಪತ್ನಿ ಮೆಲಾನಿಯಾ ಟ್ರಂಪ್‌ ಇದ್ದಾರೆ. ಇದಲ್ಲದೇ, ಪ್ರಜೆಗಳಿಗೆ ದಾನ ಮಾಡುತ್ತಿರುವ ಮೋದಿ ಮತ್ತು ಪತ್ನಿ ಜಶೋಧಾ ಬೆನ್‌ ಅವರೂ ಇದ್ದಾರೆ.

ಸದ್ಯ ಟ್ರಂಪ್‌ ಅವರಈ ಪೋಸ್ಟ್‌ಗೆ ಈ ವರೆಗೆ 54 ಸಾವಿರಕ್ಕೂ ಅಧಿಕ ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 15.1 ಸಾವಿರ ಮಂದಿ ರೀಟ್ವೀಟ್‌ ಮಾಡಿಕೊಂಡಿದ್ದಾರೆ. ಇದಕ್ಕೆ 6.7 ಸಾವಿರ ಕಮೆಂಟ್‌ಗಳೂ ಬಂದಿವೆ.

ಎಡಿಟ್‌ ಮಾಡಲಾದ ವಿಡಿಯೊ ಇರುವ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿಕೊಂಡಿದ್ದಕ್ಕೆ ಆಕ್ಷೇಪ, ವ್ಯಂಗ್ಯ ಮತ್ತು ಮೆಚ್ಚುಗೆಗಳೂ ಕೇಳಿ ಬಂದಿವೆ.

‘ಇದುವರೆಗಿನ ನಿಮ್ಮ ಪೋಸ್ಟ್‌ಗಳ ಪೈಕಿ ಇದು ಅತ್ಯಂತ ಕೆಳದರ್ಜೆಯದ್ದು. ನೀವೊಬ್ಬ ಸೈಕೋಪಾತ್‌,’ ಎಂದು ಅಮೆರಿಕದ ಚಿತ್ರ ನಿರ್ಮಾಪಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

‘ಈ ಪೋಸ್ಟ್‌ ಅದ್ಭುತವಾಗಿದೆ. ಅತ್ಯಂತ ಕ್ರಿಯಾಶೀಲವಾದ ಈ ಪೋಸ್ಟ್‌ ನನಗೆ ಹಿಡಿಸಿತು ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.

ಇನ್ನು ಭಾರತ ಪ್ರವಾಸ ಕೈಗೊಂಡಿರುವ ಟ್ರಂಪ್‌ ಅವರಿಗೆ ಕೊರೋನಾ ವೈರಸ್‌ನ ಬಗ್ಗೆ ಎಚ್ಚರಿಕೆಯನ್ನೂ ನೀಡಲಾಗಿದೆ. ‘ಅಸಂಖ್ಯ ಚೀನಾ ಪ್ರವಾಸಿಗಳ ಬಗ್ಗೆ ಭಾರತ ತುಟಿ ಬಿಗಿಹಿಡಿದುಕೊಂಡಿದೆ. ಕರೋನಾ ವೈರಸ್‌ ಬಗ್ಗೆ ಎಚ್ಚರದಿಂದಿರಿ,’ ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT