ಶನಿವಾರ, ಮೇ 30, 2020
27 °C

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಐಸಿಯುಗೆ ದಾಖಲು

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

boris johnson

ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್  ಆರೋಗ್ಯ ಹದಗೆಟ್ಟಿದ್ದು ಸೋಮವಾರ ಅವರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ಡ್ರೌನಿಂಗ್ ಸ್ಟ್ರೀಟ್ ಕಚೇರಿ ತಿಳಿಸಿದೆ.

ವಿಪರೀತ ಜ್ವರ ಇದ್ದ ಕಾರಣ ಭಾನುವಾರ ಜಾನ್ಸನ್‌ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊರೊನಾ ಸೋಂಕು ಲಕ್ಷಣಗಳು ಕಾಣಿಸಿಕೊಂಡಾಗಲೇ ಜಾನ್ಸನ್ ಸೆಲ್ಫ್ ಕ್ವಾರಂಟೈನ್‌ನಲ್ಲಿದ್ದು, ಕಳೆದ 10 ದಿನಗಳಿಂದ ಅವರಿಗೆ ವಿಪರೀತ ಜ್ವರ ಕಾಣಿಸಿಕೊಂಡಿತ್ತು.

ಪ್ರಧಾನಿ ಆಸ್ಪತ್ರೆಗೆ ದಾಖಲಾಗಿರುವುದರಿಂದ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್‌ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.
ಜಾನ್ಸನ್ ಅವರನ್ನು ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಿಸಿದ್ದು, ಆಮ್ಲಜನಕ ನೀಡಲಾಗಿದೆ. ಸೋಮವಾರ ಮಧ್ಯಾಹ್ನ ಪ್ರಧಾನಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ವೈದ್ಯರ ತಂಡದ ಅನುಮತಿಯಂತೆ ಅವರನ್ನು ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ಪ್ರಧಾನಿ  ಕಚೇರಿಯ ವಕ್ತಾರ ಹೇಳಿದ್ದಾರೆ. 

ಇದನ್ನೂ ಓದಿಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯದಲ್ಲಿ ಚೇತರಿಕೆ 

ಅಗತ್ಯ ಸಂದರ್ಭಗಳಲ್ಲಿ ತನಗೆ ಸಹಾಯ ಮಾಡುವಂತೆ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಲ್ಲಿ  ಜಾನ್ಸನ್ ಕೇಳಿಕೊಂಡಿದ್ದಾರೆ ಎಂದು ಹೇಳಿದ ಡ್ರೌನಿಂಗ್ ಸ್ಟ್ರೀಟ್, ಪ್ರಧಾನಿ ಪ್ರಜ್ಞಾವಸ್ಥೆಯಲ್ಲೇ ಇದ್ದಾರೆ. ಜಾನ್ಸನ್ ಅವರಿಗೆ ವೆಂಟಿಲೇಷನ್ ಸಹಾಯ ಬೇಕಾಗಿ ಬರಬಹುದು ಎಂಬ ಕಾರಣದಿಂದಲೇ ಐಸಿಯುಗೆ ದಾಖಲಿಸಲಾಗಿದೆ ಎಂದು ಡ್ರೌನಿಂಗ್ ಸ್ಟ್ರೀಟ್ ಹೇಳಿದೆ. ಮಾರ್ಚ್  26ರಂದು ಜಾನ್ಸನ್ (55) ಅವರಿಗೆ ಕೊರೊನಾ  ಸೋಂಕು ದೃಢಪಟ್ಟಿತ್ತು.

ಇದನ್ನೂ ಓದಿಕೋವಿಡ್-19 ಬಾಧಿತ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು