ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಷ್ಯಾದ ಅಣ್ವಸ್ತ್ರ ಧಾರಣ ಸಾಮರ್ಥ್ಯದ ಬಾಂಬರ್‌ ಹಾರಾಟಕ್ಕೆ ಅಮೆರಿಕ ಪ್ರತಿರೋಧ

Last Updated 10 ಜೂನ್ 2020, 13:19 IST
ಅಕ್ಷರ ಗಾತ್ರ

ಮಾಸ್ಕೊ: ಅಮೆರಿಕದ ಯುದ್ಧ ವಿಮಾನಗಳು ಅಣ್ವಸ್ತ್ರ ಧಾರಣ ಸಾಮರ್ಥ್ಯ ಹೊಂದಿರುವ ಬಾಂಬರ್‌ಗಳ ಹಾರಾಟಕ್ಕೆ ಪ್ರತಿರೋಧ ವ್ಯಕ್ತಪಡಿಸಿದೆ ಎಂದು ರಷ್ಯಾ ಮೂಲದ ಆರ್‌ಐಎ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ.

ರಷ್ಯಾದ ರಕ್ಷಣಾ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿರುವ ಆರ್‌ಐಎ, ಅಮೆರಿಕ ಬಳಿಯ ಕಡಲಿನಲ್ಲಿ ತಟಸ್ಥ ಪ್ರದೇಶದ ಮೇಲೆ ವಾಡಿಕೆಯಂತೆ ಈ ಬಾಂಬರ್‌ಗಳು ಹಾರಾಟ ನಡೆಸುವ ವೇಳೆ ಈ ಘಟನೆ ನಡೆದಿದೆ ಎಂದು ವರದಿ ಮಾಡಿದೆ.

ಟ್ಯೂಪ್‌ಲೆವ್‌ ಟು–95ಎಂಎಸ್‌ ಬಾಂಬರ್‌ಗಳು ಅಂತರರಾಷ್ಟ್ರೀಯ ನಿಯಮಗಳಿಗೆ ಅನುಸಾರವಾಗಿಯೇ ಹಾರಾಟ ನಡೆಸಿದ್ದವು. ಅಮೆರಿಕದ ಎಫ್‌–22 ರಾಪ್ಟರ್‌ ಯುದ್ಧವಿಮಾನಗಳು ಈ ಬಾಂಬರ್‌ಗಳಿಗೆ ಪ್ರತಿರೋಧವೊಡ್ಡಿದವು ಎಂದೂ ರಷ್ಯಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT