ಬುಧವಾರ, ಮೇ 27, 2020
27 °C

ಕೋವಿಡ್-19 ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯಹಸ್ತ ಚಾಚಿದ ಅಮೆರಿಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ವಾಷಿಂಗ್ಟನ್: ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತಕ್ಕೆ 29 ಲಕ್ಷ ಡಾಲರ್ (₹21.71 ಕೋಟಿ) ಸೇರಿದಂತೆ 64 ದೇಶಗಳಿಗೆ 17.40 ಕೋಟಿ ಡಾಲರ್ (₹1,300 ಕೋಟಿ) ಆರ್ಥಿಕ ಸಹಾಯವನ್ನು ಅಮೆರಿಕ ಶುಕ್ರವಾರ ಘೋಷಿಸಿದೆ.

ಫೆಬ್ರುವರಿಯಲ್ಲಿ ಅಮೆರಿಕ ಘೋಷಿಸಿದ್ದ 100 ದಶಲಕ್ಷ ಡಾಲರ್‌ಗೆ ಹೆಚ್ಚುವರಿಯಾಗಿ ಸಹಾಯಧನವನ್ನು ಘೋಷಿಸಿದೆ.

ಅಮೆರಿಕದ ಜಾಗತಿಕ ಪ್ರತಿಕ್ರಿಯೆ ಭಾಗವಾಗಿ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಸೇರಿದಂತೆ ಅನೇಕ ಇಲಾಖೆಗಳು ಮತ್ತು ಏಜೆನ್ಸಿಗಳು ಹೊಸದಾಗಿ ಈ ಸಹಾಯಧನವನ್ನು ಘೋಷಿಸಿವೆ. ಜಾಗತಿಕ ಪಿಡುಗಾಗಿರುವ ಕೊರೊನಾ ವೈರಸ್ ಸೋಂಕಿನಿಂದ ತೀವ್ರ ಹೊಡೆತಕ್ಕೆ ಸಿಲುಕಿರುವ 64 ರಾಷ್ಟ್ರಗಳಿಗೆ ಸಹಾಯಹಸ್ತ ಚಾಚಿದೆ. 

ಭಾರತ ಸರ್ಕಾರವು ಕರೊನಾ ವಿರುದ್ಧ ಹೋರಾಡಲು ಪ್ರಯೋಗಾಲಯ ವ್ಯವಸ್ಥೆ, ರೋಗ ಪತ್ತೆ ಮಾಡುವ ಕೇಂದ್ರ ಮತ್ತು ಈವೆಂಟ್ ಆಧಾರಿತ ಕಣ್ಗಾವಲುಗಳನ್ನು ಸಕ್ರಿಯಗೊಳಿಸಲು ಮತ್ತು ರೋಗ ತಡೆಗೆ ತಾಂತ್ರಿಕ ತಜ್ಞರನ್ನು ಬೆಂಬಲಿಸಲು ಮತ್ತು ಹೆಚ್ಚಿನವುಗಳಿಗೆ ಸಹಾಯ ಮಾಡಲು 2.9 ಮಿಲಿಯನ್ ಡಾಲರ್ ಅನ್ನು ನೀಡುತ್ತಿದೆ ಎಂದು ಯುಎಸ್ ಸ್ಟೇಟ್ ಇಲಾಖೆಯು ತಿಳಿಸಿದೆ.

ದಶಕಗಳಿಂದ ಅಮೆಲಿರಕವು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ದ್ವಿಪಕ್ಷೀಯ ನೆರವು ನೀಡುವ ವಿಶ್ವದ ಅತಿದೊಡ್ಡ ಪೂರೈಕೆದಾರ ರಾಷ್ಟ್ರವಾಗಿದೆ. ಅಮೆರಿಕ ಹಲವಾರು ಜೀವಗಳನ್ನು ಉಳಿಸಿದೆ, ರೋಗಕ್ಕೆ ಹೆಚ್ಚು ಗುರಿಯಾಗುವ ಜನರನ್ನು ರಕ್ಷಿಸಿದೆ, ಆರೋಗ್ಯ ಸಂಸ್ಥೆಗಳನ್ನು ನಿರ್ಮಿಸಿದೆ ಮತ್ತು ಸಮುದಾಯಗಳು ಮತ್ತು ರಾಷ್ಟ್ರಗಳ ಸ್ಥಿರತೆಯನ್ನು ಉತ್ತೇಜಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಅಂತರರಾಷ್ಟ್ರೀಯ ಅಭಿವೃದ್ಧಿಯ (USAID) ಡೆಪ್ಯುಟಿ ಕಮಿಷನರ್ ಬೋನಿ ಗ್ಲಿಕ್  ಅವರು ಸುದ್ದಿಗಾರರಿಗೆ ತಿಳಿಸಿದರು.

ರೋಗದ ವಿರುದ್ದ ಹೋರಾಡಲು ಮತ್ತು ಉತ್ತಮ ಸಮುದಾಯ ರೂಪಿಸಲು  ನೆರವಾಗುವಂತೆ ದಕ್ಷಿಣ ಏಷ್ಯಾಗೆ ಸುಮಾರು 1 ಮಿಲಿಯನ್ ಡಾಲರ್ ಅನುದಾನವನ್ನು ಆರೋಗ್ಯ ಕ್ಷೇತ್ರಕ್ಕೆ ನೆರವು ನೀಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು