ಸೋಮವಾರ, ಫೆಬ್ರವರಿ 17, 2020
28 °C

ಅಮೆರಿಕದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಅಲ್‌ಖೈದಾ ಯೆಮನ್ ಮುಖ್ಯಸ್ಥ ಹತ್ಯೆ

ಏಜನ್ಸೀಸ್ Updated:

ಅಕ್ಷರ ಗಾತ್ರ : | |

 Qassim al-Rimi

ವಾಷಿಂಗ್ಟನ್: ಅರೇಬಿಯನ್ ಪೆನಿನ್ಸುಲಾದಲ್ಲಿ ಅಲ್‌ಖೈದಾ ನಾಯಕ ಖಾಸಿಂ ಅಲ್ ರಿಮಿಯನ್ನು ಅಮೆರಿಕ ಸೇನೆ ಹತ್ಯೆ ಮಾಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ ನೌಕಾ ನೆಲೆ ಮೇಲೆ  ನಡೆದ ದಾಳಿ ಹೊಣೆಯನ್ನು ಅಲ್‌ಖೈದಾ ಹೊತ್ತಿದ್ದು, ಅದರ ಬೆನ್ನಲ್ಲೇ ಅಮೆರಿಕ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದೆ.

ಅಮೆರಿಕ ಯೆಮೆನ್‌ನಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಸಿದ್ದು ಅರೇಬಿಯನ್ ಅರೇಬಿಯನ್ ಪೆನಿನ್ಸುಲಾ (ಎಕ್ಯುಎಪಿ)ಯಲ್ಲಿ ಅಲ್‌ಖೈದಾ ಸಂಘಟನೆಯ ಸಂಸ್ಥಾಪಕ ಮತ್ತು ನಾಯಕ ಖಾಸಿಂ ಅಲ್ ರಿಮಿಯನ್ನು ಹತ್ಯೆ ಮಾಡಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.

 ಫ್ಲೊರಿಡಾದಲ್ಲಿರುವ ಅಮೆರಿಕದ ನೌಕಾ ನೆಲೆ ಮೇಲೆ ಡಿಸೆಂಬರ್ 6ರಂದು ನಡೆದ ದಾಳಿಯ ಹೊಣೆಯನ್ನು ಎಕ್ಯುಎಪಿ ಹೊತ್ತುಕೊಂಡಿತ್ತು. ಈ  ದಾಳಿಯಲ್ಲಿ ಸೌದಿ ವಾಯುದಳದ ಅಧಿಕಾರಿ ಅಮೆರಿಕದ ಮೂವರು ನಾಯಕರನ್ನು ಹತ್ಯೆ ಮಾಡಿದ್ದನು.  

ರಿಮಿ ನೇತೃತ್ವದಲ್ಲಿ ಎಕ್ಯುಎಪಿ ಯೆಮೆನ್‌ನಲ್ಲಿರುವ ನಾಗರಿಕರ ಮೇಲೆ ಹಿಂಸಾಚಾರ ನಡೆಸಿದ್ದು, ಅಮೆರಿಕದಲ್ಲಿ ನಡೆದ ಹಲವಾರು ದಾಳಿಗಳಿಗೆ ಕುಮ್ಮಕ್ಕು ನೀಡಿದೆ.

ಆತನ ಹತ್ಯೆಯಿಂದಾಗಿ ಎಕ್ಯುಎಪಿ ಮತ್ತು ಅಲ್‌ಖೈದಾಗೆ ಹಿನ್ನಡೆಯಾಗಿದೆ. ನಮ್ಮ ದೇಶದ ಭದ್ರತೆಗೆ ಸಂಚಕಾರವನ್ನುಂಟು ಮಾಡುವ ಈ ಸಂಘಟನೆಗಳನ್ನು ನಿರ್ನಾಮ ಮಾಡಲು ಇದು ಮತ್ತಷ್ಟು ಸಹಕಾರಿಯಾಗಿದೆ ಎಂದಿದ್ದಾರೆ ಟ್ರಂಪ್.  ಆದಾಗ್ಯೂ, ಈ ಕಾರ್ಯಾಚರಣೆ ಯಾವಾಗ ನಡೆಯಿತು ಎಂಬುದರ ಬಗ್ಗೆ ಅಮೆರಿಕ ಮಾಹಿತಿ ನೀಡಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು