ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ತೀವ್ರ ಹಾನಿ: ಚಿಕಾಗೋದಲ್ಲಿ ಯುವತಿಗೆ ಶ್ವಾಸಕೋಶ ಕಸಿ

Last Updated 12 ಜೂನ್ 2020, 3:17 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚಿಕಾಗೋದಲ್ಲಿ ಕೊರೊನಾ ಸೋಂಕಿಗೆ ಒಳಗಾಗಿದ್ದ 20 ವರ್ಷದ ಯುವತಿಗೆ ತಜ್ಞ ವೈದ್ಯರು ಯಶಸ್ವಿಯಾಗಿ ಎರಡು ಶ್ವಾಸಕೋಶಗಳನ್ನು ಕಸಿ ಮಾಡಿದ್ದಾರೆ.

ಸೋಂಕಿಗೆ ಒಳಗಾಗಿರುವ ವ್ಯಕ್ತಿಗೆ ಈ ರೀತಿ ಶ್ವಾಸಕೋಶಗಳ ಕಸಿ ಮಾಡಿರುವುದು ಅಮೆರಿಕದಲ್ಲೇ ಮೊದಲು ಎನ್ನಲಾಗಿದೆ. ಯುವತಿ ಕಳೆದ ಆರು ವಾರದಿಂದ ನಾರ್ಥ್‌ವೆಸ್ಟರ್ನ್‌ ಮೆಮೊರಿಯಲ್‌ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಇದ್ದರು. ಕೊರೊನಾ ಸೋಂಕಿನಿಂದಾಗಿ ತೀವ್ರವಾಗಿ ಹಾನಿಯಾಗಿದ್ದ ಶ್ವಾಸಕೋಶಗಳು ಕಾರ್ಯನಿರ್ವಹಿಸಲು ವಿಫಲವಾದಾಗ, ಕಸಿ ಮಾಡಲು ವೈದ್ಯರು ನಿರ್ಧರಿಸಿದ್ದರು.

‘ಆಕೆ ಬದುಕುಳಿಯಲು ಶ್ವಾಸಕೋಶದ ಕಸಿಯೊಂದೇ ಆಯ್ಕೆಯಾಗಿತ್ತು. ತಾಂತ್ರಿಕವಾಗಿ ಇದೊಂದು ಸವಾಲು. ಜೊತೆಗೆ ಕೋವಿಡ್‌–19ನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ರೋಗಿಗಳಿಗೆ ಈ ರೀತಿ ಕಸಿ ಮಾಡುವುದರಿಂದ ಅವರು ಬದುಕುವ ಸಾಧ್ಯತೆಯೂ ಹೆಚ್ಚಿರುತ್ತದೆ’ ಎಂದು ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ.ಅಂಕಿತ್‌ ಭರತ್ ತಿಳಿಸಿದರು.

ಈ ಮಟ್ಟಕ್ಕೆ ಶ್ವಾಸಕೋಶಕ್ಕೆ ಹಾನಿಯಾಗಿರುವುದನ್ನು ಇದೇ ಮೊದಲು ನೋಡಿರುವುದಾಗಿ ಕಸಿ ಚಿಕಿತ್ಸೆ ನೆರವೇರಿಸಿದ ವೈದ್ಯರ ತಂಡ ತಿಳಿಸಿದೆ.

ಚೀನಾದಲ್ಲಿ ಕಳೆದ ಮಾರ್ಚ್‌ನಲ್ಲಿ 66 ವರ್ಷದ ಮಹಿಳೆ ಮೇಲೆ ಇಂಥ ಶ್ವಾಸಕೋಶ ಕಸಿ ನಡೆಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT